fbpx

ಲಾರಿ ಚಾಲಕನ ಆವಾಂತರಕ್ಕೆ ಬಲಿಯಾಗಿದ್ದು ಅಮಾಯಕರು, ಶಾಕಿಂಗ್ ವಿಡಿಯೋ ನೋಡಿ

ನಿಯಂತ್ರಣ ಕಳೆದುಕೊಂಡ ಟ್ರಕ್ ಒಂದು ಕಾರುಗಳಿಗೆ ಗುದ್ದಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ರಷ್ಯಾದ ಚೆಲ್ಯಬಿಂಸ್ಕ್ ಪ್ರಾಂತ್ಯದಲ್ಲಿ ನಡೆದಿದೆ.

ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣಕ್ಕೆ ವಾಹನಗಳು ಮೆಲ್ಲನೆ ಸಂಚರಿಸುತ್ತಿದ್ದರೆ, ವೇಗವಾಗಿ ಬಂದ ಟ್ರಕ್ ಸಾಲಾಗಿ ಸಂಚರಿಸುತ್ತಿದ್ದ ಕಾರುಗಳಿಗೆ ಗುದ್ದಿದೆ. ಟ್ರಕ್ ಗುದ್ದಿದ ರಭಸಕ್ಕೆ ಐದು ಕಾರುಗಳು ನಜ್ಜುಗುಜ್ಜಾಗಿ ಹೋಗಿವೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಘಟನೆಯಿಂದ ಸ್ಥಳದಲ್ಲೇ ಇಬ್ಬರು ಸಾವಿಗೀಡಾದರೆ, ಏಳು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಮಾಹಿತಿ ಪ್ರಕಾರ ಟ್ರಕ್‌ನ ಬ್ರೇಕ್ ಫೈಲ್ಯೂರ್ ಆಗಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಳೆದ ಜೂನ್16ರಂದು ಈ ಭೀಕರ ಅಪಘಾತ ಸಂಭವಿಸಿದ್ದು, ಅಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಜವರಾಯನ ಅಟ್ಟಹಾಸದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!