fbpx

Please assign a menu to the primary menu location under menu

ಮಗುವನ್ನು ಕೆಲಸದಾಕೆಯ ಸುಪರ್ದಿಗೆ ಬಿಟ್ಟು ದುಡಿಯೋಕೆ ಹೋಗ್ತಿದ್ರು ದಂಪತಿ, ಮನೆಯ ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ರು! ವೈರಲ್ ವಿಡಿಯೋ ನೋಡಿ

ಮನೆ ಕೆಲಸದವರ ಮೇಲೆ ಮಾಲೀಕರು ನಡೆಸುವ ದೌರ್ಜನ್ಯದ ಬಗ್ಗೆ ನಾವು ಸಾಕಷ್ಟು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಮಾತ್ರ ಅದಕ್ಕೆ ತದ್ವಿರುದ್ಧವಾದ ಸುದ್ದಿಯೊಂದು ಹೊರಬಿದ್ದಿದೆ. ಪುಟ್ಟ ಮಗುವಿನ ಮೇಲೆ ಮನೆ ಕೆಲಸದಾಕೆಯೇ ರಾಕ್ಷಸಿ ರೀತಿ ವರ್ತಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಘಟನೆ ನಡೆದಿರೋದು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ. ಇಲ್ಲಿನ ನಿವಾಸಿಗಳಾಗಿರುವ ದಂಪತಿ ತಮ್ಮ ಮಗುವನ್ನು ನೋಡಿಕೊಳ್ಳಲು ಕೆಲಸದಾಕೆಯನ್ನು ನೇಮಿಸಿ ದುಡಿಯೋಕೆ ಹೋದ್ರೆ ಇತ್ತ ಕೆಲಸದಾಕೆ ಮಗುವಿನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸ್ತಾ ಇದ್ಲು.

ದಂಪತಿ ಮನೆಯಲ್ಲಿರುವವರೆಗೆ ಸಾಚಾಳಂತೆ ವರ್ತಿಸುತ್ತಿದ್ದ ಕೆಲಸದಾಳು, ದಂಪತಿ ಮನೆಯಿಂದ ಕಾಲು ಹೊರಗಿಡುತ್ತಿದ್ದಂತೆ ಮಗುವಿನ ಮೇಲೆ ತನ್ನ ದರ್ಪ ತೋರಿಸ್ತಾ ಇದ್ಲು. ಸೋಪ ಮೇಲೆ ಕೂತಿದ್ದ ಮಗುವನ್ನು ಕಾಲಿನಿಂದ ಒದಿಯೋದು, ಕೈಗೆ ಸಿಕ್ಕ ವಸ್ತುಗಳಿಂದ ಮಗುವಿನ ಮೇಲೆ ಹಲ್ಲೆ ನಡೆಸೋದು ಮಾಡ್ತಾ ಇದ್ಲು.

ಕೆಲಸದಾಕೆಗೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿರೋ ಬಗ್ಗೆ ಮಾಹಿತಿ ಇರಲಿಲ್ಲ. ಸಂಜೆ ದಂಪತಿ ಕೆಲಸದಿಂದ ಹಿಂದಿರುಗಿ ಬಂದಾಗ ಮಗು ತಂದೆ-ತಾಯಿಯಲ್ಲಿ ಕೆಲಸದಾಕೆಯ ದುಷ್ಕೃತ್ಯಗಳನ್ನು ಹೇಳಿ ಅತ್ತಿದೆ. ಮೊದಲಿಗೆ ದಂಪತಿ ಏನೋ ಕೀಟಲೆ ಮಾಡಿದ್ದಕ್ಕೆ ಎರಡೇಟು ಕೊಟ್ಟಿರುತ್ತಾಳೆ ಎಂದು ಸುಮ್ಮನಾಗಿದ್ದಾರೆ.

ಆದರೆ ಹೇಗೂ ಸಿಸಿಟಿವಿ ದೃಶ್ಯ ಇದೆಯಲ್ಲ ಎಂದು ನೋಡೋಕೆ ಹೋದ್ರೆ ಕೆಲಸದಾಕೆಯ ರಾಕ್ಷಸಿ ಮುಖ ಬಯಲಾಗಿದೆ. ದಂಪತಿ ತಕ್ಷಣ ವಿಡಿಯೋ ಸಾಕ್ಷಿಯೊಂದಿಗೆ ಪೋಲೀಸ್ ಠಾಣೆಗೆ ತೆರಳಿ ಕೆಲಸದಾಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೆಲಸದಾಕೆಯ ಮೇಲೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪ್ರಕರಣ ದಾಖಲಿಸಿದ ಪೋಲೀಸರು, ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಗುವಿನ ಮೇಲೆ ಮನಬಂದಂತೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಆಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮಗುವಿನ ಮೇಲೆ ಹಲ್ಲೆ ನಡೆಸಿದ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿದೆ ನೋಡಿ,

Watch Video

video
error: Content is protected !!