fbpx

ಮಹಿಳೆಯ ಹೊಟ್ಟೆಯೊಳಗಿತ್ತು ನಾಲ್ಕು ಅಡಿ ಉದ್ದದ ಹಾವು, ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಹೊಟ್ಟೆನೋವೆಂದು ಆಸ್ಪತ್ರೆ ಸೇರಿದ್ದ ಮಹಿಳೆಯ ಉದರದಲ್ಲಿ ನಾಲ್ಕು ಅಡಿ ಉದ್ದದ ಹಾವು ಪತ್ತೆಯಾಗಿದೆ. ರಷ್ಯಾದ ಡಾಗೆಸ್ತಾನ್ ಎಂಬಲ್ಲಿ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳೆ ವಿಪರೀತ ಹೊಟ್ಟೆನೋವೆಂದು ಆಸ್ಪತ್ರೆ ಸೇರಿದ್ದು, ಪ್ರಾರಂಭದಲ್ಲಿ ಮಹಿಳೆಯ ಹೊಟ್ಟೆನೋವಿಗೆ ಕಾರಣ ಏನು ಎಂದು ತಿಳಿದಿರಲಿಲ್ಲ. ನಂತರ ಪರೀಕ್ಷೆ ಮಾಡಿದ ವೈದ್ಯರಿಗೆ ಆಕೆಯ ಹೊಟ್ಟೆಯೊಳಗೆ ಹಾವು ಸೇರಿರುವುದು ಪತ್ತೆಯಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಮಹಿಳೆಯನ್ನು ಪ್ರಜ್ಞಾಹೀನಗೊಳಿಸಿದ ವೈದ್ಯರು, ಟ್ಯೂಬ್ ಮೂಲಕ ಆಕೆಯ ಹೊಟ್ಟೆಯೊಳಗಿದ್ದ ನಾಲ್ಕು ಅಡಿ ಉದ್ದದ ಹಾವನ್ನು ಹೊರತೆಗೆದಿದ್ದಾರೆ. ಮಹಿಳೆಯ ಹೊಟ್ಟೆಯಿಂದ ಹಾವನ್ನು ಹೊರತೆಗೆಯುವ ವಿಡಿಯೋ ವೈರಲ್ ಆಗಿದ್ದು, ಹಾವನ್ನು ನೋಡಿದ ವೈದ್ಯರೇ ಶಾಕ್‌ಗೆ ಒಳಗಾಗಿದ್ದಾರೆ.

ಅಷ್ಟಕ್ಕೂ ಹಾವು ಮಹಿಳೆಯ ಹೊಟ್ಟೆಯೊಳಗೆ ಸೇರಿದ್ಹೇಗೆ ಗೊತ್ತೇ?

ಮಹಿಳೆಯು ತನ್ನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯಲು ತೆರಳಿದ್ದು, ಅಲ್ಲೇ ನಿದ್ದೆಗೆ ಜಾರಿದ್ದಾಳೆ. ಈ ಸಂದರ್ಭದಲ್ಲಿ ನಿದ್ದೆಯ ಮಂಪರಿನಲ್ಲಿದ್ದ ಮಹಿಳೆಯು ಬಾಯಿ ತೆರೆದು ಮಲಗಿದ್ದು, ಹಾವು ಬಾಯಿಯ ಮೂಲಕ ಹೊಟ್ಟೆಯೊಳಗೆ ಸೇರಿದೆ.

ಅಂದು ಮಹಿಳೆಗೆ ಇದರ ಅರಿವೇ ಆಗಿಲ್ಲವಂತೆ. ಮರುದಿನ ಮಹಿಳೆಗೆ ಜೋರು ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ವೈದ್ಯರು ಮಹಿಳೆಯ ಹೊಟ್ಟೆ ಸೇರಿದ್ದ ನಾಲ್ಕು ಅಡಿ ಉದ್ದದ ಹಾವನ್ನು ಹೊರತೆಗಿದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!