ಕೆಲ ದಿನಗಳ ಹಿಂದಷ್ಟೇ ಬೆಕ್ಕೊಂದು ಮಾಲೀಕನ ಅಂಗಡಿಗೆ ಕನ್ನ ಹಾಕಿ ಹಣದ ಕಟ್ಟು ಎತ್ತಿಕೊಂಡು ಹೋಗಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.
ಹಕ್ಕಿಯೊಂದು ಅಂಗಡಿಯೊಳಕ್ಕೆ ಬಂದು ನೋಟಿನ ಅಟ್ಟಿಯನ್ನೇ ಕೊಕ್ಕಿನಲ್ಲಿ ಹಿಡಿದು ಹಾರಿಹೋದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ಮಹಿಳಾ ಗ್ರಾಹಕರೊಬ್ಬರು ಸೂಪರ್ ಮಾರ್ಕೆಟ್ನಲ್ಲಿ ವಸ್ತುಗಳನ್ನು ಖರೀದಿಸಿ, ಅದರ ಮೊತ್ತವನ್ನು ಅಂಗಡಿ ಮಾಲೀಕನಿಗೆ ಕೊಡಲು ತೂಕದ ಮಿಷಿನ್ ಮೇಲೆ ಇಟ್ಟಿದ್ದಾರೆ.
ಅದೇ ಸಮಯದಲ್ಲಿ ಅಲ್ಲಿಗೆ ಬಂದ ಹಕ್ಕಿ ತೂಕದ ಮಿಷಿನ್ ಮೇಲೆ ಕೂತಿದೆ. ಸ್ವಲ್ಪ ಸಮಯ ಅಲ್ಲೇ ಕೂತ ಹಕ್ಕಿಯನ್ನು ಮಹಿಳೆ ಮುಟ್ಟಿ ಓಡಿಸೋಕೆ ಪ್ರಯತ್ನಿಸುತ್ತಿದ್ದಂತೆ ಹಕ್ಕಿ ಅಲ್ಲಿದ್ದ ನೋಟುಗಳ ಅಟ್ಟಿಯನ್ನು ಕೊಕ್ಕಿನಲ್ಲಿ ಹಿಡಿದು ಹಾರಿ ಹೋಗಿದೆ.
ಹಕ್ಕಿ ಹಣದೊಂದಿಗೆ ಹಾರಿಹೋಗಿದ್ದನ್ನು ಕಂಡು ಅಲ್ಲಿದ್ದವರು ಶಾಕ್ಗೆ ಒಳಗಾಗಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ಹಣದ ಕೌಂಟರ್ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ,
Watch Video
