fbpx

Please assign a menu to the primary menu location under menu

ಸೇನಾ ವಾಹನದ ಮೇಲೆ ಬಾಂ’ಬ್ ಎಸೆಯಲು ಹೋಗಿ ತಮ್ಮ ಬೆಂಬಲಿಗರನ್ನೇ ಸ್ಪೋಟಿಸಿಕೊಂಡ ಕಾಶ್ಮೀರಿ ಉ’ಗ್ರರು, ವೈರಲ್ ವಿಡಿಯೋ ನೋಡಿ

ಸೇನಾ ವಾಹನದ ಮೇಲೆ ಗ್ರೇನೇಡ್ ಎಸೆಯಲು ಹೋಗಿ ಉಗ್ರರು ತಮ್ಮ ಜನರನ್ನೇ ಸ್ಫೋಟಿಸಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನಾ ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಕೊನೆಯ ವಾಹನದ ಮೇಲೆ ಗ್ರೆನೇಡ್ ಎಸೆಯಲು ಯತ್ನಿಸಿದ್ದಾರೆ.

ಸೇನಾ ವಾಹನ ಬಾರಾಮುಲ್ಲಾದಿಂದ ಶ್ರೀನಗರದ ಕಡೆಗೆ ತೆರಳುತ್ತಿದ್ದಂತೆ ಉಗ್ರರು ಅದರ ಮೇಲೆ ಗ್ರೆನೇಡ್ ಎಸೆದಿದ್ದಾರೆ. ಆದರೆ ಗುರಿ ತಪ್ಪಿದ ಗ್ರೆನೇಡ್ ಅಲ್ಲೇ ರಸ್ತೆ ಬದಿ ನಿಂತಿದ್ದ ಸಾರ್ವಜನಿರ ಗುಂಪಿನ ಮೇಲೆ ಬಿದ್ದಿದೆ.

ಗ್ರೆನೇಡ್ ಏಕಾಏಕಿ ಸ್ಪೋಟಗೊಂಡಿದ್ದು ಆರು ನಾಗರೀಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇದೇ ನಾಗರೀಕರು ಸೇನಾ ಕಾರ್ಯಚರಣೆ ಸಂದರ್ಭಗಳಲ್ಲಿ ಉಗ್ರರ ರಕ್ಷಣೆಗೆ ಸೇನೆಯ ಮೇಲೆ ಕಲ್ಲು ತೂರೋದು, ಅಡಚಣೆ ಮಾಡೋದು ಮಾಡುತ್ತಾರೆ.

ಇದೀಗ ತಾವೇ ಸಾಕಿ ಬೆಳೆಸಿದ ಉಗ್ರರು ಅಲ್ಲಿನ ಜನರ ಪ್ರಾಣಕ್ಕೆ ಕಂಟಕವಾಗಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡ ನಾಗರಿಕರನ್ನು ಸೈನಿಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ. ಗ್ರೆನೇಡ್ ಸ್ಪೋಟದ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿವೆ ನೋಡಿ,

Watch Video

video
error: Content is protected !!