ಕಟ್ಟಡದ ಮೇಲೆ ಪಾಕಿಸ್ತಾನಿ ಧ್ವಜ ಹಾರಿಸಿದ ಕಾರಣಕ್ಕೆ ಮುಸ್ಲಿಂ ಮತಾಂಧ ವ್ಯಕ್ತಿಯನ್ನು ಬಂಧಿಸಲಾಗಿದೆ. ಇಂದೋರ್ನಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ವ್ಯಕ್ತಿಗೆ ಸೇರಿದ ಕಟ್ಟಡವೊಂದರ ಮೇಲೆ ಎತ್ತರದಲ್ಲಿ ಪಾಪಿ ಪಾಕಿಸ್ತಾನಕ್ಕೆ ಸೇರಿದ ಧ್ವಜ ಹಾರಿಸಲಾಗಿದೆ.
ಇಂದೋರ್ನ ಶಿಪ್ರಾ ಬಳಿಯ ಫಾರೂಖ್ ಖಾನ್ ಎಂಬಾತನಿಗೆ ಸೇರಿದ ಮನೆಯ ಟೆರೇಸ್ ಮೇಲೆ ಪಾಕಿಸ್ತಾನದ ಧ್ವಜ ಹಾರುತ್ತಿತ್ತು. ಇದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಪೋಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.
ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗಿದ್ದು, ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ತೀವ್ರತೆ ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಇಂದೋರ್ ಪೋಲೀಸರು ಆರೋಪಿ ಫಾರೂಖ್ ಖಾನ್ನನ್ನು ಬಂಧಿಸಿ, ಪಾಕಿಸ್ತಾನಿ ಧ್ವಜವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಫಾರೂಖ್ ಖಾನ್ ವಿರುದ್ಧ 153ಎ ಸೆಕ್ಷನ್ ಅಡಿ ದೂರು ದಾಖಲಿಸಿದ್ದು, ನ್ಯಾಯಾಲಯದೆದುರು ಹಾಜರುಪಡಿಸಿದ ಬಳಿಕ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಂದೋರ್ ಪೋಲೀಸ್ ಅಧಿಕಾರಿ ಲಖನ್ ಸಿಂಗ್, “ಫಾರೂಖ್ ಎಂಬಾತನ ಮನೆ ಛಾವಣಿ ಮೇಲೆ ಪಾಕಿಸ್ತಾನ ಬಾವುಟ ಹಾರುತ್ತಿತ್ತು. ಈ ಕುರಿತು ಆತನನ್ನು ಪ್ರಶ್ನಿಸಿದಾಗ ಈ ಬಾವುಟವನ್ನು 12 ವರ್ಷದ ಬಾಲಕ ತಿಳಿಯದೆ ಹಾರಿಸಿದ್ದಾನೆ” ಎಂದಿದ್ದಾನೆ.
ಆದರೆ 12 ವರ್ಷದ ಬಾಲಕ ಛಾವಣಿ ಮೇಲೆ ಅಷ್ಟು ಎತ್ತರಕ್ಕೆ ಬಾವುಟ ಹಾರಿಸಲು ಸಾಧ್ಯವಿಲ್ಲ, ಈ ಬಗ್ಗೆ ಆತನನ್ನು ಇನ್ನಷ್ಟು ತನಿಖೆಗೆ ಒಳಪಡಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ. ವಿಡಿಯೋ ನೋಡಿ,
Watch Video
