fbpx

ನೋಡನೋಡುತ್ತಿದ್ದಂತೆ ಗಾಳಿಪಟದ ದಾರಕ್ಕೆ ಸಿಕ್ಕಿ ನೂರು ಅಡಿ ಎತ್ತರಕ್ಕೆ ಹಾರಿದ 3ವರ್ಷದ ಮಗು, ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಬೃಹತ್ ಗಾಳಿಪಟದ ದಾರಕ್ಕೆ ಸಿಕ್ಕಿ ಮೂರು ವರ್ಷದ ಮಗು ನೂರು ಅಡಿ ಎತ್ತರಕ್ಕೆ ಹಾರಿದ ಘಟನೆ ನಡೆದಿದೆ. ತೈವಾನ್‌ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಈ ಘಟನೆ ನಡೆದಿದ್ದು, ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತೈವಾನ್‌ನ ನನ್ಲಿಯೋವೋ ಎಂಬಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಾಳಿಪಟ ಉತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಾರಿಬಿಟ್ಟ ಬೃಹತ್ ಗಾಳಿಪಟದ ದಾರಕ್ಕೆ ಮೂರು ವರ್ಷದ ಮಗು ಸಿಲುಕಿಕೊಂಡಿದೆ. ಗಾಳಿಯ ರಭಸಕ್ಕೆ ನೋಡನೋಡುತ್ತಿದ್ದಂತೆ ಮಗು ಗಾಳಿಪಟದ ಜೊತೆ ಆಗಸಕ್ಕೆ ಹಾರಿದೆ.

img 20200831 wa00173964241867846831474

ಗಾಳಿಪಟ ಉತ್ಸವ ವೀಕ್ಷಣೆಗೆ ಸಾವಿರಾರು ಜನ ಸೇರಿದ್ದರು, ಬೃಹತ್ ಗಾಳಿಪಟಗಳ ಹಾರಾಟ, ಪ್ರದರ್ಶನ ನಡೆಯುತ್ತಿತ್ತು. ಭಾರೀ ಗಾತ್ರದ ಗಾಳಿಪಟವೊಂದನ್ನು ಹಾರಿಬಿಡುವ ಸಂದರ್ಭದಲ್ಲಿ ಮೂರು ವರ್ಷದ ಮಗು ಅತ್ತ ತೆರಳಿದೆ. ಈ ಸಂದರ್ಭದಲ್ಲಿ ಗಾಳಿಪಟದ ದಾರ ಮಗುವಿನ ದೇಹಕ್ಕೆ ತಗುಲಿಕೊಂಡಿದ್ದು, ಗಾಳಿಯ ವೇಗ ಅಧಿಕವಾಗಿದ್ದ ಕಾರಣ ಮಗು ಆಕಾಶದಲ್ಲಿ ಹಾರಾಡಿದೆ.

ಇದನ್ನೂ ಓದಿ:  ಅಪರೂಪದ ಎರಡು ತಲೆಯ ಹಾವು ಪತ್ತೆ, ವೈರಲ್ ವಿಡಿಯೋ ನೋಡಿ

ಏಕಾಏಕಿ ಸುಮಾರು ನೂರು ಅಡಿ ಎತ್ತರಕ್ಕೆ ಮಗು ಹಾರಿ ಹೋಗಿದ್ದು ಅಲ್ಲಿದ್ದವರು ಒಮ್ಮೆಲೆ ಬೆಚ್ಚಿಬಿದ್ದಿದ್ದಾರೆ. ಮಗು ಏನಾದ್ರು ಗಾಳಿಪಟದಿಂದ ತಪ್ಪಿ ಕೆಳಕ್ಕೆ ಬಿದ್ದರೆ ಪ್ರಾಣಾಪಾಯವಾಗುವ ಸಂಭವವಿತ್ತು, ದೇವರ ದಯೆಯಿಂದ ಮಗು ಸುರಕ್ಷಿತವಾಗಿ ಕೆಳಕ್ಕೆ ಇಳಿದಿದೆ.

ಗಾಳಿಪಟದ ಜೊತೆ ಮಗು ಕೆಳಕ್ಕೆ ಬರುತ್ತಿದ್ದಂತೆ ಅಲ್ಲಿದ್ದವರು ತಕ್ಷಣ ಓಡಿಹೋಗಿ ಮಗುವನ್ನು ಹಿಡಿದಿದ್ದಾರೆ. ಸುಮಾರು ಮೂವತ್ತು ಸೆಕೆಂಡುಗಳ ಕಾಲ ಮಗು ಆಗಸದಲ್ಲಿ ಹಾರಾಡಿದೆ. ಸದ್ಯ ಈ ವಿಡಿಯೋ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!