fbpx

ಮತ್ತೆ ಭಾರತದ ಗಡಿ ಅತಿಕ್ರಮಣಕ್ಕೆ ಬಂದ ಚೀನೀಯರನ್ನು ಅಟ್ಟಾಡಿಸಿ ಓಡಿಸಿದ ಭಾರತೀಯ ಯೋಧರು (ವಿಡಿಯೋ)

ನೆರೆಹೊರೆ ರಾಷ್ಟ್ರಗಳ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಚೀನಾ, ಗಡಿಯಲ್ಲಿ ಮತ್ತೆ ಭಾರತದ ಮೇಲೆ ಆಕ್ರಮಣಕ್ಕೆ ಯತ್ನಿಸಿ ಮುಖಭಂಗಕ್ಕೀಡಾಗಿದೆ. ಗಾಲ್ವಾನ್ ಘರ್ಷಣೆ ನಡೆದು ಎರಡು ತಿಂಗಳು ಕಳೆಯುವ ಮೊದಲೇ ಮತ್ತೆ ರಾತ್ರೋರಾತ್ರಿ ಭಾರತದ ಭೂಭಾಗದ ಮೇಲೆ ಆಕ್ರಮಣಕ್ಕೆ ಯತ್ನಿಸಿದೆ.

ಆಗಸ್ಟ್ 29-30ರ ರಾತ್ರಿ ಪಾಂಗೋಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಪಿಎಲ್ಎ ಸೈನಿಕರು ಅತಿಕ್ರಮಣಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಈ ಅತಿಕ್ರಮಣದ ಬಗ್ಗೆ ಮೊದಲೇ ಊಹಿಸಿದ್ದ ಭಾರತದ ಸೇನಾ ಪಡೆಗಳು ಆಕ್ರಮಣಕ್ಕೆ ಯತ್ನಿಸಿದ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.


Continue Reading

img 20200831 wa00132904377491651886097

ಈ ಭಾಗದಲ್ಲಿ ಕಳೆದ ಕೆಲ ಸಮಯಗಳಿಂದ ಭಾರೀ ಚಟುವಟಿಕೆಯಲ್ಲಿ ತೊಡಗಿರುವ ಚೀನೀ ಸೈನಿಕರು, ಗಡಿ ಅತಿಕ್ರಮಿಸಲು ಯತ್ನಿಸುವ ಬಗ್ಗೆ ಭಾರತದ ಪಡೆಗಳು ಮೊದಲೇ ಅಂದಾಜು ಮಾಡಿದ್ದವು. ಹಾಗಾಗಿ, ಆ ಪ್ರದೇಶದಲ್ಲಿ ನಮ್ಮ ಸೇನಾ ನಿಯೋಜನೆ ಹೆಚ್ಚಿಸಿದೆವು.

ಇದನ್ನೂ ಓದಿ:  ಶ್ರೀ ಮಹಾಗಣಪತಿ ಆಶೀರ್ವಾದದಿಂದ‌ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ಚೀನೀ ಸೈನಿಕರು ಗಡಿ ಅತಿಕ್ರಮಣ ಮಾಡಲು ಯತ್ನಿಸುತ್ತಿದ್ದಂತೆ, ಭಾರತೀಯ ಯೋಧರು ಚೀನೀಗಳನ್ನು ಹಿಮ್ಮೆಟ್ಟಿಸಿದ್ದಾರೆ. ಗಡಿ ಯಥಾಸ್ಥಿತಿಯನ್ನು ಮಾರ್ಪಾಡು ಮಾಡುವ ಚೀನಾದ ದುರುದ್ದೇಶವನ್ನು ಈ ಮೂಲಕ ವಿಫಲಗೊಳಿಸಲಾಗಿದ್ದು, ನಮ್ಮ ಸೈನಿಕರು ಚೀನೀ ಸೈನಿಕರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ.

ಭಾರತೀಯ ಸೇನೆ ಮಾತುಕತೆ ಮೂಲಕ ಶಾಂತಿ ಕಾಪಾಡಲು ಬದ್ಧವಾಗಿದೆ. ಆದರೆ ತನ್ನ ಭೂಪ್ರದೇಶದ ಮೇಲೆ ಯಾರಾದ್ರು ಅತಿಕ್ರಮಣಕ್ಕೆ ಯತ್ನಿಸಿದರೆ ಅದರ ರಕ್ಷಣೆಗೂ ಕಟಿಬದ್ಧವಾಗಿದೆ. ಸದ್ಯ ಚುಶುಲ್ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾಪಡೆಗಳ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಫ್ಲಾಗ್ ಮೀಟಿಂಗ್ ನಡೆಯುತ್ತಿದ್ದು, ಇದರಲ್ಲಿ ಈ ವಿಚಾರಗಳನ್ನು ಚರ್ಚಿಸಲಾಗುತ್ತಿದೆ ಎಂದು ಭಾರತ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

Watch Video

Trending Short Videos

close

This will close in 26 seconds

error: Content is protected !!