fbpx

Please assign a menu to the primary menu location under menu

ನಾಮಕರಣ ಸಂಭ್ರಮದಲ್ಲಿ ಧರ್ಮಸ್ಥಳದ ಮರಿ ಆನೆಯ ತುಂಟಾಟದ ವಿಡಿಯೋ ಸಖತ್ ವೈರಲ್, ಇಲ್ಲಿದೆ ನೋಡಿ ವಿಡಿಯೋ

ತುಳುನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳ ಮಂಜುನಾಥನ ಸನ್ನಿದಿಯಲ್ಲಿ ಇಂದು ಸಂತಸ ಸಡಗರ ಮನೆಮಾಡಿದೆ. ಶ್ರೀ ಕ್ಷೇತ್ರದ ಆನೆ ಲಕ್ಷ್ಮೀ ಕಳೆದ ತಿಂಗಳು ಜುಲೈ1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು, ಇಂದು (ಆಗಸ್ಟ್ 31) ತುಲಾ ಲಗ್ನ ಮುಹೂರ್ತದಲ್ಲಿ ಆನೆಮರಿಯ ನಾಮಕರಣ ಶಾಸ್ತ್ರ ನೆರವೇರಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ನಾಮಕರಣ ಶಾಸ್ತ್ರ ನೆರವೇರಿಸಿದರು. ವೀರೇಂದ್ರ ಹೆಗ್ಗಡೆಯವರ ಮೊಮ್ಮಗಳು ಮಾನ್ಯ ಅವರು ಆನೆ ಮರಿಗೆ ‘ಶಿವಾನಿ’ ಹೆಸರು ಉದ್ಘೋಶಿಸುವ ಮೂಲಕ ನಾಮಕರಣ ಮಾಡಿದರು.

ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣ ಅವರಿಗೆ ಸನ್ಮಾನ ನೆರವೇರಿಸಿದರು. ನಾಮಕರಣ ಸಂದರ್ಭದಲ್ಲಿ ಆನೆ ಮರಿ ಶಿವಾನಿಯ ತುಂಟಾಟದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video
error: Content is protected !!