fbpx

ಊಟ ಕೇಳಿದ ಮಗುವಿನ ಮೈಯೆಲ್ಲಾ ಸುಟ್ಟು ಮಾರಣಾಂತಿಕ ಹಲ್ಲೆ ನಡೆಸಿದ ರಾಕ್ಷಸಿ ಅಜ್ಜಿ, ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಊಟ ಕೇಳಿದ ಮಗುವಿಗೆ ಮಾರಣಾಂತಿಕ ಹಲ್ಲೆ ನಡೆಸಿ ಮೈಯೆಲ್ಲಾ ಸುಟ್ಟ ರಾಕ್ಷಸಿ ಅಜ್ಜಿಯ ವಿಡಿಯೋ ವೈರಲ್ ಆಗಿದೆ. ಬೆಂಗಳೂರಿನ ಗುರಪ್ಪನಪಾಳ್ಯದ ನಿವಾಸಿ ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿಯ ಪುತ್ರ ಎರಡು ವರ್ಷ ಹರೆಯದ ಅರ್ಮಾನ್ ಗಂಭೀರ ಗಾಯಗೊಂಡ ನತದೃಷ್ಟ ಮಗು.

ಅಜ್ಜಿ ಮುಬೀನಾ ಎಂಬಾಕೆಯೇ ಹಲ್ಲೆ ನಡೆಸಿದವಳು. ಕೇವಲ ಊಟ ಕೇಳಿದ ಕಾರಣಕ್ಕೆ ಮಗುವಿನ ಕಣ್ಣು, ಹಣೆ, ಮೂಗು ಸೇರಿದಂತೆ ದೇಹದ ಇತರೆಡೆ ಕ್ಯಾಂಡಲ್ ಬೆಂಕಿಯಿಂದ ಸುಟ್ಟಿದ್ದಾಳೆ. ಈ ಬಗ್ಗೆ ಸ್ವತಃ ಮಗುವಿನ ತಂದೆಯೇ ಅತ್ತೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.


Continue Reading

img 20200831 wa0006863235911357394273

ಅಜ್ಜಿ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದರೂ ಆ ಮಗುವಿನ ತಾಯಿ ಮಾತ್ರ ಸುಮ್ಮನೆ ನಿಂತು ನೋಡುತ್ತಿದ್ದಳು. ಇನ್ನು ಅಲ್ಲೇ ಇದ್ದ ಕೆಲವರು ಮಗುವಿನ ರೋಧನೆ ನೋಡಿ ನಗುತ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಮಗುವಿನ ಮೇಲೆ ಹಲ್ಲೆ ನಡೆಸಬೇಡಿ ಎಂದ ಅಳಿಯನಿಗೆ ಅತ್ತೆ, ಮನೆಬಿಟ್ಟು ಹೋಗುವಂತೆ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ.

ಇದನ್ನೂ ಓದಿ:  ಬೈಕ್ ಸವಾರ ದೇವರಂತೆ ಬಂದು ಮಗುವನ್ನು ಕಾಪಾಡಿದ ಅದ್ಭುತ ದೃಶ್ಯ! ವೈರಲ್ ವಿಡಿಯೋ ನೋಡಿ

ಮಗುವಿನ ಮೇಲೆ ಅತ್ತೆಯ ದೌರ್ಜನ್ಯ ದಿನೇದಿನೇ ಹೆಚ್ಚಾಗುತ್ತಿದ್ದಂತೆ ರೋಸಿ ಹೋದ ಮಗುವಿನ ತಂದೆ ವಿಡಿಯೋ ಸಾಕ್ಷಿ ಸಮೇತ ಅತ್ತೆ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ಯ ಆರೋಪಿ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದು, ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಜ್ಜಿಯ ಕ್ರೌರ್ಯದ ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!