fbpx

ಇನ್ನೇನು ಪ್ರವಾಹದಲ್ಲಿ ಕೊಚ್ಚಿಹೋಗಲಿದ್ದ ಇಬ್ಬರನ್ನು ಪ್ರಾಣಪಣಕ್ಕಿಟ್ಟು ಕಾಪಾಡಿದ್ರು, ವೈರಲ್ ವಿಡಿಯೋ ನೋಡಿ

ಭಾರತದಾದ್ಯಂತ ಭಾರೀ ಮಳೆಯಾಗುತ್ತಿದೆ, ಹಲವು ರಾಜ್ಯಗಳು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನಗಳಲ್ಲಿ ಮಳೆಯ ಆರ್ಭಟ ಇನ್ನೂ ನಿಂತಿಲ್ಲ.

ಈ ರಾಜ್ಯಗಳಲ್ಲಿ ಹಲವು ಜಿಲ್ಲೆಗಳು ಜಲಾವೃತವಾಗಿದ್ದು,, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಏಕಾಏಕಿ ಸುರಿದ ಮಳೆಯಿಂದಾಗಿ ನದಿ ನೀರಿನ ಮಟ್ಟ ಏರಿಕೆಯಾಗಿ ಇಬ್ಬರು ಯುವಕರು ಬಂಡೆಯ ಮೇಲೆ ಸಿಲುಕಿ ಪ್ರಾಣಾಪಾಯದಲ್ಲಿದ್ದರು.

ಇನ್ನೇನು ಸ್ವಲ್ಪ ನೀರಿನ ಮಟ್ಟ ಏರಿಕೆಯಾಗಿದ್ದರೂ ಇಬ್ಬರೂ ನದಿನೀರಿನಲ್ಲಿ ಕೊಚ್ಚಿಹೋಗುತ್ತಿದ್ದರು. ಆದರೆ ಅವರ ಅದೃಷ್ಟ ಚೆನ್ನಾಗಿತ್ತು, ತಕ್ಷಣ ಸ್ಥಳಕ್ಕೆ ಆಗಮಿಸಿದ ಎನ್‌ಡಿ‌ಆರ್‌ಎಫ್ ತಂಡ ಏಣಿಗಳನ್ನು ಬಳಸಿ ಇಬ್ಬರನ್ನೂ ರಕ್ಷಿಸಿದ್ದಾರೆ.

ವಿಡಿಯೋದಲ್ಲಿ ಇಬ್ಬರು ಎನ್‌ಡಿಆರ್‌ಎಫ್ ಸಿಬ್ಬಂದಿ ಏಣಿಗಳ ಸಹಾಯದಿಂದ ಯುವಕರು ಸಿಲುಕಿದ್ದ ಬಂಡೆಯ ಮೇಲೆ ತೆರಳಿ ಅವರನ್ನು ಅಲ್ಲಿಂದ ರಕ್ಷಣೆ ಮಾಡಿದ ನಂತರ ಹಿಂದಿರುಗೋದನ್ನು ಕಾಣಬಹುದಾಗಿದೆ. ಬಂಡೆಯ ಎರಡೂ ಕಡೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಎನ್‌ಡಿ‌ಆರ್‌ಎಫ್ ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಆ ಇಬ್ಬರನ್ನು ರಕ್ಷಿಸಿದ್ದಾರೆ.

ವಿಡಿಯೋ ನೋಡಿದ ಅನೇಕರು, ಈ ರೀತಿ ರಕ್ಷಣೆ ಮಾಡೋಕೆ ಹೋಗಿ ತಮ್ಮ ಪ್ರಾಣಕ್ಕೆ ಕುತ್ತು ತರೋ ಬದಲು ಹೆಲಿಕಾಫ್ಟರ್ ಬಳಸಿ ರಕ್ಷಣೆ ಮಾಡ್ಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಅಲ್ಲಿ ಹೆಲಿಕಾಫ್ಟರ್ ಬರೋದನ್ನ ಕಾದು ಕೂರೋ ಹೊತ್ತಿಗೆ ನೀರಿನ ಮಟ್ಟ ಏರಿಕೆಯಾಗಿದ್ರೆ ಯುವಕರು ಕೊಚ್ಚಿಹೋಗೋ ಸಂಭವವಿತ್ತು. ಯುವಕರನ್ನು ರಕ್ಷಣಾ ಸಿಬ್ಬಂದಿ ಯಾವ ರೀತಿ ರಕ್ಷಿಸಿದ್ರು ನೋಡಿ ಈ ವಿಡಿಯೋ,

Watch Video

error: Content is protected !!