fbpx

ಭಾರತೀಯ ಯೋಧರ ಕೈಗೆ ಸಿಕ್ಕಿಬಿದ್ದ ಉ’ಗ್ರ ಹೇಳಿದ್ದೇನು ನೋಡಿ (ವೈರಲ್ ವಿಡಿಯೋ)

ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಕಳೆದ 48ಗಂಟೆಗಳಲ್ಲಿ ಹತ್ತಕ್ಕೂ ಹೆಚ್ಚು ಉಗ್ರರು ಹತರಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಅಲ್-ಬದರ್ ಉಗ್ರ ಸಂಘಟನೆಯ ಕಮಾಂಡರ್ ಶಕೂರ್ ಪರ್ರೆಯನ್ನು ಹೊಡೆದುರುಳಿಸುವುದರ ಜೊತೆಗೆ ಬಿಜೆಪಿ ನಾಯಕನನ್ನು ಅಪಹರಿಸಿ ಹತ್ಯೆಗೈದಿದ್ದ ಉಗ್ರ ಸುಹೈಲ್ ಭಟ್ ಸೇರಿ ಹತ್ತಕ್ಕೂ ಹೆಚ್ಚು ಉಗ್ರರನ್ನು ಸೇನೆ ಬಲಿಗೆಡವಿದೆ.

ಜಮ್ಮು ಕಾಶೀರದ ಶೋಫಿಯಾನ್‌ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇಲೆ ಜಿಲ್ಲೆಯ ಕಿಲೂರಾ ಪ್ರದೇಶದಲ್ಲಿ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಉಗ್ರರು ಏಕಾಏಕಿ ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಉಗ್ರರು ಮೃತಪಟ್ಟಿದ್ದರು.

ಅಪರೂಪದ ನಡೆ ಎಂಬಂತೆ ಓಬ್ಬ ಉಗ್ರ ಸೇನೆಗೆ ಶರಣಾಗಿದ್ದು, ಎರಡು ಎ.ಕೆ. ರೈಫಲ್‌, ಮೂರು ಪಿಸ್ತೂಲ್‌ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಸೈನಿಕರ ಜೊತೆ ಮಾತನಾಡಿದ ಉಗ್ರ, ‘ನಾನು ಉಗ್ರ ಸಂಘಟನೆ ಸೇರಿ ತಪ್ಪು ಮಾಡಿದೆ. ನನಗೆ ಜೀವಿಸಲು ಅವಕಾಶ ನೀಡಿದ ಭಾರತೀಯ ಸೇನೆಗೆ ನಾನು ಚಿರ‌‌ಋಣಿ. ಇನ್ನು ಮುಂದೆ ನಾನು ನನ್ನ ಮೆಡಿಕಲ್ ವಿದ್ಯಾಭ್ಯಾಸ ಪೂರ್ತಿ ಮಾಡಿ, ಭಾರತದ ಹೆಸರನ್ನು ಪ್ರಜ್ವಲಿಸುವಂತೆ ಮಾಡುತ್ತೇನೆ’ ಎಂದಿದ್ದಾನೆ.

ಆದರೆ ಈ ವಿಡಿಯೋವನ್ನು ನೋಡಿದ ಹಲವರು ಆತನ ಮಾತನ್ನು ನಂಬಲು ತಯಾರಿಲ್ಲ. ಸೈನಿಕರ ರಕ್ತ ಹರಿಸಿರುವ ಈ ಉಗ್ರನಿಗೆ ಕ್ಷಮಾಧಾನ ನೀಡೋದು ಒಂದೇ, ಹಾವಿಗೆ ಹಾಲೆರೆಯುವುದೂ ಒಂದೇ. ಆತನನ್ನು ಎನ್ಕೌಂಟರ್ ಮಾಡಿ ಎಂದು ಆಗ್ರಹಿಸಿದ್ದಾರೆ. ಉಗ್ರ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!