fbpx

ಹಾಡುಹಗಲೇ ಹಿಂದೂ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಿಗ್ಗಾಮುಗ್ಗಾ ಒದೆತಿಂದ ಸಾಧಿಕ್ (ವಿಡಿಯೋ)

ಆಡು ಮೇಯಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಕೈಗೆ ಸಿಕ್ಕು ಹಿಗ್ಗಾಮುಗ್ಗಾ ಒದೆತಿಂದಿದ್ದಾನೆ. ಉಜಿರೆ ಸಮೀಪದ ನಿನ್ನಿಕಲ್ಲು ಎಂಬಲ್ಲಿ ಆಡು ಮೇಯಿಸುತ್ತಿದ್ದ 23ರ ಹರೆಯದ ಯುವತಿಯ ಮೇಲೆ ಸಾಧಿಕ್(27) ಎಂಬಾತ ಕೈ ಹಿಡಿದು ಎಳೆದು ಆತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಯುವತಿ ಕಿರುಚಿಕೊಂಡಿದ್ದರಿಂದ ಸ್ಥಳೀಯರು ಓಡಿಬಂದು ಕಾಮುಕನಿಂದ ಯುವತಿಯನ್ನು ರಕ್ಷಿಸಿವುದರ ಜೊತೆಗೆ ಓಡಿಹೋಗಲು ಯತ್ನಿಸಿದ ಸಾದಿಕ್‌ನನ್ನು ಹಿಡಿದಿದ್ದಾರೆ. ವಿಷಯ ತಿಳಿದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಕಾಮುಕ ಸಾಧಿಕ್‌‌ಗೆ ಸ್ಥಳದಲ್ಲೇ ಗೂಸ ನೀಡಿದ್ದಾರೆ.


Continue Reading

img 20200829 wa0114197208714421761341

ಕಾಮುಕನನ್ನು ಸಾಧಿಕ್‌ಗೆ ಧರ್ಮದೇಟು ನೀಡಿದ ಬಳಿಕ ಆತನನ್ನು ಬೆಳ್ತಂಗಡಿ ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿ ಮಲೆಬೆಟ್ಟುವಿನಲ್ಲಿ ಕಲ್ಲಿನ ಕೆಲಸ ಮಾಡುತ್ತಿದ್ದು, ಯುವತಿಯ ಚಲನವಲನವನ್ನು ಗಮನಿಸಿ, ನಿರ್ಜನ ಪ್ರದೇಶಕ್ಕೆ ಯುವತಿ ಆಗಮಿಸುತ್ತಿದ್ದಂತೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಮಹಿಳೆ! ವೈರಲ್ ವಿಡಿಯೋ ನೋಡಿ

ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ಬೆಳ್ತಂಗಡಿ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇದೀಗ ಹಾಡುಹಗಲೇ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು ಸ್ಥಳೀಯರನ್ನು ಕಂಗೆಡಿಸಿದೆ.

ಆರೋಪಿಗೆ ಗರಿಷ್ಟ ಶಿಕ್ಷೆ ಕೊಡಿಸಬೇಕು ಎಂದು ಹಾಗೂ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಪೊಲೀಸರು ಎಚ್ಚರವಹಿಸಬೇಕು ಎಂದು ಕೇಳಿಕೊಂಡಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿದ ಸಾಧಿಕ್ ವಿರುದ್ಧ ಯುವತಿಯ ಸಂಬಂಧಿಕರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.

Watch Video

Trending Short Videos

close

This will close in 26 seconds

error: Content is protected !!