fbpx

ಬಡ ಆಟೋ ಚಾಲಕರನ್ನು ಕಳ್ಳರಿಗೆ ಹೋಲಿಸಿದ ಭೂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಆಟೋ ಚಾಲಕ! ವೈರಲ್ ವಿಡಿಯೋ ನೋಡಿ

ಬಡ ಆಟೋ ಚಾಲಕರನ್ನು ಕಳ್ಳರಿಗೆ ಹೋಲಿಸಿದ ವ್ಯಕ್ತಿಯೋರ್ವನನ್ನು ಆಟೋಚಾಲಕ ತರಾಟೆಗೆ ತೆಗದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ. ದಣಿದಿದ್ದ ಕಾರಣ ಮರದ ನೆರಳಲ್ಲಿ ಆಟೋ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕನ ಮೇಲೆ ಶ್ರೀಮಂತಿಕೆಯ ಅಮಲಿನಲ್ಲಿ ವ್ಯಕ್ತಿಯೋರ್ವ ಅವಹೇಳನವಾಗಿ ಮಾತನಾಡಿದ್ದಾನೆ.

ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿದ್ದ ಮರದ ಕೆಳಗೆ ಚಾಲಕ ತನ್ನ ಆಟೋ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ರೆ, ಅಲ್ಲಿಗೆ ಆಗಮಿಸಿದ ವ್ಯಕ್ತಿ ಆಟೋ ತೆಗೆಯುವಂತೆ ಗದರಿದ್ದಾನೆ. ಆಟೋ ಚಾಲಕ ಯಾಕೆ ತೆಗೀಬೇಕು ಎಂದು ಕಾರಣ ಕೇಳಿದ್ರೆ ಚಾಲಕನನ್ನು ಹೀಯಾಳಿಸಿದ್ದೂ ಅಲ್ದೆ, ಕಳ್ಳರಿಗೆ ಹೋಲಿಸಿ ಅವಮಾನ ಮಾಡಿದ್ದಾನೆ.

‘ನಿಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಲ್ಲ, ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಲ್ಲಿಸಿರೋದು. ಈ ರಸ್ತೆಗೆ ನಾವೂ ಟ್ಯಾಕ್ಸ್ ಕಟ್ಟಿದ್ದೀವಿ’ ಎಂದು ಆಟೋ ಚಾಲಕ ಆ ವ್ಯಕ್ತಿಯಲ್ಲಿ ಹೇಳಿದ್ದಾನೆ. ಅದಕ್ಕೆ ಆ ವ್ಯಕ್ತಿ ‘ನಿಮ್ಮನ್ನು ನೋಡಿದ್ರೆ(ಆಟೋ ಚಾಲಕರನ್ನು) ಕಳ್ಳರ ತರ ಕಾಣ್ತೀರ‌, ಇಲ್ಲಿ ಕಳ್ಳತನ ಆದ್ರೆ ನೀವು ತಂದು ಕೊಡ್ತೀರ’ ಎಂದಿದ್ದೂ ಅಲ್ದೆ, ಕೆಟ್ಟ ಶಬ್ದಗಳಿಂದ ಅವಮಾನಿಸಿದ್ದಾನೆ. ಪೋಲೀಸರನ್ನು ಕರೆಸಿ ಒಳಗೆ ಹಾಕಿಸ್ತೀನಿ ಎಂದು ದರ್ಪ ತೋರಿದ್ದಾನೆ.

ಇದರಿಂದ ರೊಚ್ಚಿಗೆದ್ದ ಚಾಲಕ ಆ ವ್ಯಕ್ತಿಯನ್ನು ಸರಿಯಾಗೇ ತರಾಟೆಗೆ ತೆಗೆದುಕೊಂಡಿದ್ದಾನೆ. ಇದೀಗ ಈ ಎಲ್ಲಾ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಬಡ ಚಾಲಕರಿಗೆ ಅವಮಾನ ಮಾಡಿದ ಆ ವ್ಯಕ್ತಿಗೆ ಸರಿಯಾದ ಪಾಠ ಕಲಿಸಬೇಕಿತ್ತು ಎಂದು ಅನೇಕರು ಕಮೆಂಟ್ ಹಾಕಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!