ಎರಡು ಕೈಗಳು ಇಲ್ಲದಿದ್ರೂ, ಕಾಲಿನಲ್ಲಿ ಕ್ಯಾರಮ್ ಆಡುವ ಯುವಕನ ಸ್ಪೂರ್ತಿದಾಯಕ ವಿಡಿಯೋ ವೈರಲ್ ಆಗುತ್ತಿದೆ. ಎಲ್ಲಾ ಇದ್ದೂ ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ತಲೆತಗ್ಗಿಸಿ ಕೂರುವ ಜನರ ಮಧ್ಯೆ ಈ ಯುವಕನ ಬಗ್ಗೆ ನಿಜವಾಗಿಯೂ ಹೆಮ್ಮೆಯೆನಿಸುತ್ತದೆ.
ಯುವಕನ ಹೆಸರು ಹರ್ಷದ್ ಘೋಟಂಕರ್, ಮುಂಬೈ ಔರಂಗಾಬಾದ್ ನಿವಾಸಿಯಾಗಿರುವ ಈತ ಹುಟ್ಟಿನಿಂದ ವಿಶೇಷ ಚೇತನನಾಗಿದ್ದಾನೆ. ತನ್ನ ಕಾಲೇಜು ದಿನಗಳಲ್ಲಿ ಗೆಳೆಯರೊಂದಿಗೆ ಕ್ಯಾರಮ್ ಆಡಲು ಶುರು ಮಾಡಿದ ಈತ, ಕಾಲಿನಿಂದಲೇ ಆಡಿ ಎದುರಾಳಿಯನ್ನು ಸೋಲಿಸಬಲ್ಲ.
ಕಾಲಿನಿಂದ ಆಡೋದು ಅಂದ್ರೆ ಅಷ್ಟೇನೂ ಸುಲಭ ಇಲ್ಲ, ಒಂದು ಕಾಲಿನಲ್ಲಿ ನಿಂತು, ಇನ್ನೊಂದು ಕಾಲನ್ನು ಕ್ಯಾರಮ್ ಬೋರ್ಡ್ ಮೇಲೆ ಇಟ್ಟು ಬ್ಯಾಲೆನ್ಸ್ ಮಾಡಿ ಆಡೋದು ನಿಜಕ್ಕೂ ಸಾಹಸವೇ ಸರಿ.
ಈತ ಅದಾಗಲೇ ಅನೇಕ ಕ್ಯಾರಮ್ ಟೂರ್ನಮೆಂಟ್ಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತನ್ನದಾಗಿಸಿದ್ದಾನೆ. ‘ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆ ಮಾತು ಈ ಯುವಕನ ಸಾಧನೆಗೆ ಸೂಕ್ತವಾಗುವುದು. ಕಾಲಿನ ಬೆರಳಿನಲ್ಲಿ ಕ್ಯಾರಮ್ ಆಡುವ ವಿಡಿಯೋ ಇಲ್ಲಿದೆ ನೋಡಿ,
Watch Video
