fbpx

Please assign a menu to the primary menu location under menu

ನಾಯಿ ಮರಿಯನ್ನು ಯಾವ ರೀತಿ ತುಳಿದು ಸಾಯಿಸಿದ್ಲು ನೋಡಿ ಈ ರಾಕ್ಷಸಿ, ಮನಕಲಕುವ ವೈರಲ್ ವೀಡಿಯೋ

ಕೆಲವರು ನೋಡೋಕೆ ಚೆಂದವಾಗಿ ಕಂಡ್ರೂ ಅವರ ಮನಸ್ಸು ವಿಕಾರವಾಗಿ ಇರುತ್ತೆ. ಅದಕ್ಕೆ ಸಾಕ್ಷಿಯೆಂಬಂತಹ ಘಟನೆ ಲಖನೌನಲ್ಲಿ ನಡೆದಿದ್ದು, ರಾಕ್ಷಸಿ ಮಹಿಳೆಯೊಬ್ಬಳು ಕಾಲಿನಿಂದ ನಾಯಿ ಮರಿಯನ್ನು ತುಳಿದು ಸಾಯಿಸಿರುವ ವಿಡಿಯೋ ವೈರಲ್ ಆಗಿದೆ.

ಶ್ರೀಮಂತಿಕೆಯ ಅಮಲಿನಲ್ಲಿ ಮಹಿಳೆ ತನ್ನ ಐಷಾರಾಮಿ ಕಾರಿನಲ್ಲಿ ಪುಟ್ಟ ನಾಯಿ ಮರಿಯ ಕುತ್ತಿಗೆಯನ್ನು ಕಾಲಿನಿಂದ ಒತ್ತಿಹಿಡಿದು ಉಸಿರುಗಟ್ಟಿಸಿ ನರಳಿನರಳಿ ಸಾಯುವಂತೆ ಮಾಡಿದ್ದಾಳೆ. ನಾಯಿ ಮರಿಯನ್ನು ಕೊಂದಿದ್ದೂ ಅಲ್ಲದೆ, ತನ್ನ ಸಾಧನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾಳೆ.

ಮಹಿಳೆಯ ಕ್ರೂರತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತು. ಈ ಅಮಾನವೀಯ ಘಟನೆ ಸಂಬಂಧ ಮಹಿಳೆ ವಿರುದ್ಧ ಪ್ರಾಣಿಗಳ ಕ್ರೌರ್ಯ ಕಾಯ್ದೆಯಡಿ ದಾಖಲಿಸಲಾಗಿದೆ.

ಕ್ರೂರಿ ಮಹಿಳೆಯನ್ನು ಪೂಜಾ ಧಿಲ್ಲೋನ್ ಮತ್ತು ಅವರ ಪತಿ ರಾಜ್ ಧಿಲ್ಲೋನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ವೈರಲ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ದಂಪತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸ್ವತಂತ್ರ ಸಿಂಗ್ ಖಚಿತಪಡಿಸಿದ್ದಾರೆ.

“ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಕಮ್ನಾ ಪಾಂಡೆ ಅವರಿಂದ ಲಿಖಿತ ದೂರು ಬಂದಿದೆ. ಅದರ ಆಧಾರದ ಮೇಲೆ ನಾವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಪ್ರಾಣಿಯ ಮೇಲೆ ನಡೆದ ದೌರ್ಜನ್ಯದ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!