fbpx

Please assign a menu to the primary menu location under menu

ಮಗು ಮಾಡಿದ ತಪ್ಪಿಗೆ ಬಲಿಯಾಗಿದ್ದು ಅಮಾಯಕ ಗೊರಿಲ್ಲಾ! ವೈರಲ್ ವಿಡಿಯೋ ನೋಡಿ

ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿದ್ದ ಮಗು ಮಾಡಿದ ಆವಾಂತರಕ್ಕೆ ಅಮಾಯಕ ಗೊರಿಲ್ಲಾವೊಂದು ಬಲಿಯಾದ ಘಟನೆ 2016ರಲ್ಲಿ ನಡೆದಿತ್ತು. ಇದು ಪ್ರಪಂಚದಾದ್ಯಂತ ಪ್ರಾಣಿಪ್ರೀಯರಲ್ಲಿ ಆಕ್ರೋಶವನ್ನೇ ಉಂಟು ಮಾಡಿತ್ತು. ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.

ತಾಯಿಯ ಜೊತೆ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿದ್ದ ಪುಟ್ಟ ಬಾಲಕ ಪ್ರವಾಸಿಗರ ಸುರಕ್ಷತೆಗಾಗಿ ಹಾಕಿದ್ದ ತಡೆಗೋಡೆಯನ್ನು ಏರಿ ಗೊರಿಲ್ಲಾಗಳು ವಾಸಿಸುವ ಆವರಣದೊಳಕ್ಕೆ ಬಿದ್ದಿದ್ದ. ಇದನ್ನು ಗಮನಿಸಿದ ಗೊರಿಲ್ಲಾಗಳು ಮಗುವಿನ ಬಳಿ ಓಡಿಬಂದಿವೆ. ತಕ್ಷಣ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಗೊರಿಲ್ಲಾಗಳನ್ನು ಮರಳಿ ತಮ್ಮ ಗೂಡಿಗೆ ತೆರಳುವಂತೆ ಆಜ್ಞೆ ಮಾಡಿದ್ದಾರೆ.

ಎರಡು ಹೆಣ್ಣು ಗೊರಿಲ್ಲಾಗಳು ತಕ್ಷಣ ಹಿಂದುರುಗಿ ತಮ್ಮ ಗೂಡಿನೊಳಕ್ಕೆ ಹೋದರೆ, ‘ಹರಾಂಬೆ’ಎಂಬ ಗಂಡು ಗೊರಿಲ್ಲಾ ಮಾತ್ರ ಮರಳಿ ಹೋಗದೆ, ಕೈಗೆ ಸಿಕ್ಕ ಮಗುವನ್ನು ಹಿಡಿದು ಅತ್ತಿತ್ತ ಎಳೆದಾಡಿದೆ.

ಅಲ್ಲಿದ್ದ ಸಿಬ್ಬಂದಿ ಎಷ್ಟೇ ಆಜ್ಞೆ ಮಾಡಿದ್ರೂ ಗೊರಿಲ್ಲಾ ಮಾತ್ರ ಮಗುವನ್ನು ಬಿಡಲು ಒಪ್ಪಲಿಲ್ಲ. ಮಗುವಿನ ಜೀವಕ್ಕೆ ಅಪಾಯವಿರೋದನ್ನ ಅರಿತ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಕೊನೆಗೆ ಗೊರಿಲ್ಲಾವನ್ನು ಗುಂಡಿಟ್ಟು ಕೊಂದು ಮಗುವನ್ನು ರಕ್ಷಿಸಿದ್ದಾರೆ.

ಈ ವಿಷಯ ವಿಶ್ವದಾದ್ಯಂತ ಕೋಲಾಹಲವನ್ನೇ ಎಬ್ಬಿಸಿತ್ತು. ಗೊರಿಲ್ಲಾವನ್ನು ಕೊಲ್ಲುವ ಬದಲು ಅನಸ್ತೀಶಿಯಾ ಕೊಟ್ಟು ಮಗುವನ್ನು ರಕ್ಷಿಸಬಹುದಿತ್ತು ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮನುಷ್ಯ ಮಾಡಿದ ತಪ್ಪಿಗೆ ಗೊರಿಲ್ಲಾವೊಂದು ಪ್ರಾಣವನ್ನೇ ಕಳೆದುಕೊಂಡಿದ್ದು ದುರಂತ. ಗೊರಿಲ್ಲಾದ ಕೊನೆಯ ಕ್ಷಣದ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!