fbpx

“ಪಾಕಿಸ್ತಾನಿಯರು ನಮ್ಮ ಅಣ್ಣತಮ್ಮಂದಿರಂತೆ”, ಪಾಪಿ ಪಾಕಿಸ್ತಾನವನ್ನು ಹಾಡಿಹೊಗಳಿದ ರಾಜ್ಯ ಕಾಂಗ್ರೆಸ್ ನಾಯಕ! ವೈರಲ್ ವಿಡಿಯೋ ನೋಡಿ

ಕಾಂಗ್ರೆಸ್ ನಾಯಕರ ಪಾಕಿಸ್ತಾನ ಪ್ರೇಮ ಮತ್ತೆ ಜಗಜ್ಜಾಹೀರಾಗಿದೆ. ಧಾರವಾಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಪಾಟೀಲ್ ಪಾಕಿಸ್ತಾನವನ್ನು ಹೊಗಳಿ ಮಾಡಿರುವ ಭಾಷಣದ ತುಣುಕುಗಳು ಇದೀಗ ವೈರಲ್ ಆಗಿದೆ.

ಕರೋನಾ ನಿಯಂತ್ರಣದ ಬಗ್ಗೆ ಕೇಂದ್ರ ಹಾಗೂ ರಾಜ್ಯಸರ್ಕಾರವನ್ನು ಟೀಕಿಸುವ ಭರದಲ್ಲಿ ಪಾಕಿಸ್ತಾನವನ್ನು ಹಾಡಿ ಹೊಗಳಿರುವ ಕಾಂಗ್ರೆಸ್ ನಾಯಕ, ಪಾಕಿಸ್ತಾನೀಯರು ನಮಗೆ ಅಣ್ಣ ತಮ್ಮಂದಿರು ಎಂದು ಹೇಳಿದ್ದಾನೆ.

ಕರೋನಾ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಿಂದ ಸಾಧ್ಯವಿಲ್ಲ. ಲಾಕ್‌ಡೌನ್‌ನಿಂದಾಗಿ ಎಲ್ಲಾ ಕಾರ್ಮಿಕರು ರಸ್ತೆಗೆ ಬಿದ್ದರೂ, ದಿನಾ ದುಡಿದು ತಿನ್ನೋರು ಸಾವಿಗೀಡಾದ್ರೂ, ಆದ್ರೂ ಕರೋನಾ ನಿಯಂತ್ರಣ ಆಗಲೇ ಇಲ್ಲ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತೀಯರ ಒಂದೇ ಜೀನ್ಸ್‌ನವರು. ನಾವೆಲ್ಲರೂ ಅಣ್ಣ-ತಮ್ಮಂದಿರು. ಒಂದು ವೇಳೆ ಅಲ್ಲಿಯವರು ಇಲ್ಲಿಗೆ ಬಂದ್ರೆ ಅಲ್ಲಿಯವರು ಎಂದು ಗುರುತಿಸೋದು ಅಸಾಧ್ಯ.

ನಮ್ಮ ಎರಡು ದೇಶಗಳ ವಾತಾವರಣ, ಉಷ್ಣಾಂಶವೂ ಒಂದೇ ಆಗಿದೆ, ಆದರೂ ಪಾಕಿಸ್ತಾನದಲ್ಲಿ ಇಂದು ದಿನಕ್ಕೆ 300-400 ಪ್ರಕರಣಗಳು ಬೆಳಕಿಗೆ ಬಂದ್ರೆ, ಭಾರತದಲ್ಲಿ 70ಸಾವಿರಕ್ಕೂ ಅಧಿಕ ಪ್ರಕರಣ ಬೆಳಕಿಗೆ ಬರುತ್ತಿದೆ ಎಂದು ಪಾಪಿ ಪಾಕಿಸ್ತಾನವನ್ನು ಹಾಡಿ ಹೊಗಳಿದ್ದಾನೆ.

ನವಲಗುಂದ ಪಟ್ಟಣದಲ್ಲಿ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಭಾರತವನ್ನು ವೈರಿ ರಾಷ್ಟ್ರ ಪಾಕಿಸ್ತಾನದೊಂದಿಗೆ ಹೋಲಿಸುವ ಮೂಲಕ ರಾಷ್ಟ್ರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿಡಿಯೋ ನೋಡಿ (ಕೃಪೆ: PowerNewz)

Watch Video

error: Content is protected !!