ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಲಾರಿ ಚಕ್ರದಡಿಗೆ ಸಿಲುಕಿದ್ರೂ ಪವಾಡ ಸದೃಷವಾಗಿ ಪಾರಾದ ವಿಡಿಯೋ ಇದೀಗ ವೈರಲ್ ಆಗಿದೆ. ಲಾರಿಚಾಲಕನ ನಿರ್ಲಕ್ಷ್ಯದಿಂದಾಗಿಯೇ ಅಪಘಾತ ಸಂಭವಿಸಿದ್ದು, ಸ್ಕೂಟರ್ನಲ್ಲಿ ತೆರಳಿತ್ತಿದ್ದ ಮಹಿಳೆ ಲಾರಿ ಚಕ್ರಕ್ಕೆ ಸಿಲುಕಿದ್ದಾಳೆ.
ಲಾರಿ ಚಾಲಕ ಯಾವುದೇ ಸಿಗ್ನಲ್ ನೀಡದೆ ಏಕಾಏಕಿ ತನ್ನ ಬಲಗಡೆಗೆ ವಾಹನ ಟರ್ನ್ ಮಾಡಿದ್ದು, ಇದರ ಅರಿವಿಲ್ಲದ ಸ್ಕೂಟರ್ ಚಾಲಕಿ ಲಾರಿಯ ಚಕ್ರಕ್ಕೆ ಸಿಲುಕಿದ್ದಾಳೆ. ಲಾರಿ ಗುದ್ದಿದ ರಭಸಕ್ಕೆ ಸ್ಕೂಟರ್ ಲಾರಿಯ ಬಲಭಾಗದ ಚಕ್ರಕ್ಕೆ ಸಿಕ್ಕು ಸ್ವಲ್ಪ ದೂರದವರೆಗೆ ದೂಡಿಕೊಂಡು ಸಾಗಿದ್ದಾನೆ.
ಕೊನೆಗೆ ಅಪಘಾತದ ಅರಿವಾಗಿ ಲಾರಿಚಾಲಕ ಗಾಡಿಯನ್ನು ನಿಲ್ಲಿಸಿದ್ದು, ಮಹಿಳೆ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ಲು. ಅಪಘಾತ ನೋಡಿದವ್ರು ಮಹಿಳೆ ಚಕ್ರಕ್ಕೆ ಸಿಕ್ಕು ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ್ರೆ, ಮಹಿಳೆ ಮಾತ್ರ ಲಾರಿ ಅಡಿಯಿಂದ ತಾನೇ ಹೊರಬಂದು ಎದ್ದು ನಿಂತಿದ್ದಾಳೆ.
ಇಲ್ಲಿ ಮಹಿಳೆಯ ಜೀವ ರಕ್ಷಕನಾಗಿ ಕಾಪಾಡಿದ್ದು ಆಕೆ ಧರಿಸಿದ್ದ ಹೆಲ್ಮೆಟ್. ಮಹಿಳೆಯ ತಲೆ ಲಾರಿಯ ಚಕ್ರಕ್ಕೆ ಸಿಲುಕಿದ್ರೂ, ಮಹಿಳೆ ಹೆಲ್ಮೆಟ್ ಧರಿಸಿದ್ದ ಕಾರಣ ಲಾರಿಚಕ್ರ ಆಕೆಯ ತಲೆಯನ್ನು ತಳ್ಳಿಕೊಂಡು ಬಂದಿದೆ ವಿನಃ ಆಕೆಯ ತಲೆಯ ಮೇಲೆ ಹರಿದಿಲ್ಲ.
ಮಹಿಳೆ ದೇಹದ ತುಂಬೆಲ್ಲಾ ತರಚಿದ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾಳೆ. ಘಟನೆ ಚೀನಾದಲ್ಲಿ ನಡೆದಿರೋದು ಎಂದು ತಿಳಿದುಬಂದಿದೆ. ವಿಡಿಯೋ ಇಲ್ಲಿದೆ ನೋಡಿ,
Watch Video
