fbpx

Please assign a menu to the primary menu location under menu

ಮಾಡಿದ ಸಣ್ಣ ತಪ್ಪಿಗೆ ಪ್ರಾಣವೇ ಹೋಯ್ತು, ಭೀಕರ ಅಪಘಾತದ ವಿಡಿಯೋ ವೈರಲ್

ಬೈಕ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಬೈಕ್ ಸವಾರ ಮಾಡಿದ ಸಣ್ಣ ತಪ್ಪಿಗೆ ಪ್ರಾಣವನ್ನೇ‌ ಕಳೆದುಕೊಂಡರೆ, ಹಿಂಬದಿ ಕುಳಿತಿದ್ದ ಮಹಿಳೆಯ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ.

ಲಾರಿ ಚಾಲಕ ಎಡಭಾಗಕ್ಕೆ ಗಾಡಿಯನ್ನು ತಿರುಗಿಸಲು ಯತ್ನಿಸುವ ಸಂದರ್ಭದಲ್ಲಿ ತಪ್ಪು ಬದಿಯಿಂದ ಬಂದ ಬೈಕ್ ಸವಾರ ಲಾರಿಯನ್ನು ಓವರ್‌ಟೇಕ್ ಮಾಡಿ ಎಡಗಡೆಗೆ ಟರ್ನ್ ಮಾಡಿದ್ದಾನೆ. ಇದನ್ನು ಗಮನಿಸದ ಲಾರಿ ಚಾಲಕ ಗಾಡಿಯನ್ನು ಮುಂದಕ್ಕೆ ಚಲಾಯಿಸಿದ್ದು ಬೈಕ್ ಲಾರಿಯ ಎಡಗಡೆಯ ಚಕ್ರಕ್ಕೆ ಸಿಲುಕಿದೆ.

ಲಾರಿ ಬೈಕ್‌ಗೆ ತಗುಲುತ್ತಿದ್ದಂತೆ ಬೈಕ್ ಸವಾರರಿಬ್ಬರು ಕೆಳಕ್ಕೆ ಬಿದ್ದಿದ್ದು, ಲಾರಿ ಎಡಬದಿಯ ಚಕ್ರ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯ ತಲೆಯ ಮೇಲಿಂದ ಚಲಿಸಿದ್ರೆ ಮಹಿಳೆಯ ಹೊಟ್ಟೆಯ ಮೇಲೆ ಚಲಿಸಿದೆ. ಇದರಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಮಹಿಳೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ದೊಡ್ಡ ವಾಹನಗಳನ್ನು ಓವರ್‌ಟೇಕ್ ‌ಮಾಡುವಾಗ ತುಂಬಾ ಎಚ್ಚರಿಕೆವಹಿಸಬೇಕು, ನಾವು ಮಾಡುವ ಸಣ್ಣ ಪ್ರಮಾದವೂ ನಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ಭೀಕರ ಅಪಘಾತದ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!