ಪುಟ್ಟ ಮಕ್ಕಳ ಮೇಲೆ ಎಚ್ಚರ ವಹಿಸೋದು ಹೆತ್ತವರ ಕರ್ತವ್ಯ, ಸ್ವಲ್ಪ ಗಮನ ಆಚೀಚೆ ಆದರೂ ಭಾರೀ ಪ್ರಮಾದವೇ ನಡೆದು ಬಿಡುತ್ತೆ. ಇಂತಹದ್ದೇ ಘಟನೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಹೆತ್ತವರ ನಿರ್ಲಕ್ಷ್ಯದಿಂದಾಗಿ 3 ರಿಂದ 4ವರ್ಷ ಆಸುಪಾಸಿನ ಪುಟ್ಟ ಮಗುವೊಂದು ಆಟಿಕೆ ಬೆಲೂನ್ ಮೇಲೆ ಕೂತು ಸಮುದ್ರ ತಟದಿಂದ ಒಂದು ಕಿಲೋಮೀಟರ್ ದೂರದವರೆಗೆ ತೇಲುತ್ತಾ ಬಂದಿದೆ. ಸಮುದ್ರದಲ್ಲಿ ಮಗುವನ್ನು ಗಾಳಿ ತುಂಬಿದ ಬೆಲೂನ್ ಮೇಲೆ ಕೂರಿಸಿ ಹೆತ್ತವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು.
ಇದೀ ಸಂದರ್ಭದಲ್ಲಿ ದೊಡ್ಡ ತೆರೆಯೊಂದಕ್ಕೆ ಸಿಲುಕಿ ಮಗು ಕೂತಿದ್ದ ಬೆಲೂನ್ ತಟದಿಂದ ಬಹುದೂರ ಸಾಗಿದೆ. ಹೆತ್ತವರಿಗೆ ಇದರ ಅರಿವಾಗಿದ್ದೆ ಸ್ವಲ್ಪ ಸಮಯದ ಬಳಿಕ. ತಕ್ಷಣ ಕೋಸ್ಟ್ಗಾರ್ಡ್ಗಳಿಗೆ ತಮ್ಮ ಮಗಳು ಸಮುದ್ರದಲ್ಲಿ ಕಾಣೆಯಾದ ಬಗ್ಗೆ ಮಾಹಿತಿ ತಲುಪಿಸಿದ್ದಾರೆ.
ಕೋಸ್ಟ್ಗಾರ್ಡ್ಗಳು ಸಮುದ್ರ ವಿಹಾರಕ್ಕೆ ತೆರಳುವ ಫೆರ್ರಿಗಳಿಗೆ ಮಗು ಕಾಣೆಯಾದ ಬಗ್ಗೆ ಮಾಹಿತಿ ತಲುಪಿಸಿದ್ದಾರೆ. ತಕ್ಷಣ ಹುಡುಕಾಟಕ್ಕಿಳಿದ ಫೆರ್ರಿಗಳಿಗೆ ಮಗು ಸಮುದ್ರ ಮಧ್ಯದಲ್ಲಿ ಪತ್ತೆಯಾಗಿದೆ. ಮಗು ಬೆಲೂನ್ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಮಗು ಅಳುತ್ತಿತ್ತು.
ಮಗು ಸ್ವಲ್ಪ ಹೆದರಿ ಆಚೀಚೆ ಅಲುಗಾಡಿದ್ರೂ ಸಮುದ್ರ ಪಾಲಾಗುವ ಸಾಧ್ಯತೆ ಇತ್ತು. ಫೆರ್ರಿಯಲ್ಲಿದ್ದ ಜನ ತಕ್ಷಣ ಮಗುವನ್ನು ನೀರಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಈ ಘಟನೆ ಗ್ರೀಸ್ ಆಂಟಿರಿಯೋದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,
Watch Video
