fbpx

ಆಟವಾಡುತ್ತಾ ನೀರಿಗೆ ಬಿದ್ದ ಗೆಳೆಯನನ್ನು ತನ್ನ ಪ್ರಾಣ ಒತ್ತೆಯಿಟ್ಟು ಕಾಪಾಡಿದ ಮೂರು ವರ್ಷದ ಬಾಲಕ, ವೈರಲ್ ವಿಡಿಯೋ ನೋಡಿ

ಈಜು ಕೊಳದ ಬಳಿ ಆಟವಾಡುತ್ತಿರುವ ಸಂದರ್ಭದಲ್ಲಿ ಆಯಾತಪ್ಪಿ ನೀರಿಗೆ ಬಿದ್ದ ಗೆಳೆಯನನ್ನು ಮೂರು ವರ್ಷದ ಬಾಲಕ ತನ್ನ ಪ್ರಾಣ ಪಣಕ್ಕಿಟ್ಟು ಕಾಪಾಡಿದ್ದಾನೆ. ನೀರಿಗೆ ಬಿದ್ದಿದ್ದ ಆಟಿಕೆ ತೆಗೆಯಲು ಒಬ್ಬ ಬಾಲಕ ಯತ್ನಿಸುತ್ತಿದ್ರೆ ಅಲ್ಲಿಗೆ ಬಂದ ಇನ್ನೊಬ್ಬ ಬಾಲಕ ಆತನ ಸಹಾಯಕ್ಕೆ ಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಆತ ಆಯಾತಪ್ಪಿ ಈಜುಕೊಳಕ್ಕೆ ಬಿದ್ದಿದ್ದಾನೆ. ತಕ್ಷಣ ದಡದಲ್ಲಿದ್ದ ಬಾಲಕ ನೀರಿಗೆ ಬಿದ್ದ ಬಾಲಕನ ರಕ್ಷಣೆಗೆ ಅತ್ತಿತ್ತ ಹುಡುಕಾಡಿದ್ದಾನೆ, ಅಲ್ಲಿ ಏನೂ ಸಿಗದಿದ್ದಾಗ ಕೊನೆಗೆ ತಾನೇ ಕೈ ಚಾಚಿ ತನ್ನ ಗೆಳೆಯನ ರಕ್ಷಣೆಗೆ ಯತ್ನಿಸಿದ್ದಾನೆ.


Continue Reading

img 20200826 wa00516434456702145771122

ಸ್ವಲ್ಪ ಆಯತಪ್ಪಿದ್ರೂ ಗೆಳೆಯನನ್ನು ರಕ್ಷಿಸಲು ಹೋಗಿ ಈತನೂ ಈಜುಕೊಳಕ್ಕೆ ಬೀಳುವ ಅಪಾಯವಿತ್ತು. ಆದರೂ ಪುಟ್ಟ ಬಾಲಕ ತನ್ನ ಪ್ರಾಣ ಪಣಕ್ಕಿಟ್ಟು ಆತನ ರಕ್ಷಣೆಗೆ ಧಾವಿಸಿದ್ದಾನೆ. ಕೊನೆಗೂ ನೀರಿಗೆ ಬಿದ್ದಿದ್ದ ಗೆಳೆಯನನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾನೆ.

ಇದನ್ನೂ ಓದಿ:  ಹಾವನ್ನು ಚಾಣಾಕ್ಷತನದಿಂದ ಬೇಟೆಯಾಡಿ ತಿನ್ನೋ ಮೀನು! ವೈರಲ್ ವಿಡಿಯೋ ನೋಡಿ

ಈ ಎಲ್ಲಾ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ ತಾಯಿ ತನ್ನ ಪುಟ್ಟ ಮಗನ ಸಾಹಸದ ವಿಡಿಯೋವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!