fbpx

ನಡುರಸ್ತೆಯಲ್ಲಿ ಅಮಾಯಕ ಬಾಲಕ‌ನ ಮೇಲೆ ‘ಪೋಲಿ’ಸ್ ಕ್ರೌರ್ಯ, ಶಾಕಿಂಗ್ ವಿಡಿಯೋ ನೋಡಿ

ದೇಶದ ಗಡಿಯನ್ನು ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ್ರೆ, ದೇಶದೊಳಗಿನ ಶತ್ರುಗಳಿಂದ ನಮ್ಮನ್ನು ಕಾಪಾಡೋದು ಪೋಲೀಸರು. ಇದಕ್ಕಾಗಿ ಅದೆಷ್ಟೋ ಪೋಲಿಸರು ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ್ದಾರೆ. ಆದರೆ ಕೆಲ ಪೋಲೀಸರು ತಾವು ಮಾಡುವ ತಪ್ಪುಗಳಿಗೆ, ಇಡೀ ಪೋಲೀಸ್ ಇಲಾಖೆಯೇ ತಲೆತಗ್ಗಿಸುವಂತಹ ಪರಿಸ್ಥಿತಿ ಮಾಡಿಡುತ್ತಾರೆ.ಇದೀಗ ಪುಟ್ಟ ಬಾಲಕನ ಮೇಲೆ ಪೋಲೀಸ್ ಕಾನ್ಸ್‌ಟೇಬಲ್ ಲಾಠಿಯಿಂದ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಕಾನ್ಸ್‌ಟೇಬಲ್ ನಡುರಸ್ತೆಯಲ್ಲಿ ಬಾಲಕನ ಮೇಲೆ ಮನಬಂದಂತೆ ಲಾಠಿಯಿಂದ ಥಳಿಸಿದ್ದಾನೆ.ದೆಹಲಿಯ ಆರ್‌.ಕೆ.ಪುರಂ ಎಂಬಲ್ಲಿ ಕಳೆದ ಶನಿವಾರದಂದು ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಪೋಲಿಸ್ ಕಾನ್ಸ್‌ಟೇಬಲ್ ಕ್ರೌರ್ಯ ವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಇದನ್ನು ಕಂಡ ಕಾನ್ಸ್‌ಟೇಬಲ್ ವ್ಯಕ್ತಿಯ ಮೇಲೆಯೂ ದಾಳಿಗೆ ಮುಂದಾಗುತ್ತಿರೋದು ವಿಡಿಯೋದಲ್ಲಿ ಕಾಣಬಹುದಾಗಿದೆ.ಮಾಹಿತಿ ಪ್ರಕಾರ ಕೆಲ ಅನಾಥ ಮಕ್ಕಳು ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಮಲಗಿದ್ದು, ಅಲ್ಲಿಗೆ ಬಂದ ಕಾನ್ಸ್‌ಟೇಬಲ್ ಅವರನ್ನು ಅಲ್ಲಿಂದ ತೆರಳುವಂತೆ ಹೇಳಿದ್ದಾನೆ. 30ನಿಮಿಷ ಬಿಟ್ಟು ಬಂದಾಗ ಮಕ್ಕಳು ಅಲ್ಲೇ ಇರೋದನ್ನು ಕಂಡ ಕಾನ್ಸ್‌ಟೇಬಲ್ ಅದರಲ್ಲಿ ಒಬ್ಬನನ್ನು ಹಿಡಿದು ಲಾಠಿಯಿಂದ ಚೆನ್ನಾಗಿ ಥಳಿಸಿದ್ದಾನೆ.ಇದನ್ನು ಕಂಡ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ರೆ, ಕಾನ್ಸ್‌ಟೇಬಲ್ ಆತನ ಮೇಲೂ ಗದರಿದ್ದಾನೆ. ಆದರೆ ಆ ವ್ಯಕ್ತಿ ಕಾನ್ಸ್‌ಟೇಬಲ್ ಮಾತಿಗೆ ಬೆದರದೆ ವಿಡಿಯೋವನ್ನು ತಕ್ಷಣ ವೈರಲ್ ಮಾಡಿ, ಕಾನ್ಸ್‌ಟೇಬಲ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾನೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ಹೆಚ್ಚುವರಿ ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ಅವರು ಕಾನ್ಸ್‌ಟೇಬಲ್ ಮೇಲೆ ತನಿಖೆಗೆ ಆದೇಶ ನೀಡಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾನ್ಸ್‌ಟೇಬಲ್ ಬಾಲಕನ ಮೇಲೆ ಹಲ್ಲೆನಡೆಸುವ ವೈರಲ್ ವಿಡಿಯೋ ನೋಡಿ,

Watch Video

video


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ
error: Content is protected !!