fbpx

Please assign a menu to the primary menu location under menu

ಕಾಂಪೌಂಡ್ ಹಾರಿ ರಸ್ತೆಗೆ ಬಂದ ಮಗುವಿನ ಮೇಲೆ ದಾಳಿ ಮಾಡಿ ಎಳೆದಾಡಿದ ಬೀದಿ ನಾಯಿಗಳು, ಶಾಕಿಂಗ್ ವಿಡಿಯೋ ನೋಡಿ

ಬೀದಿನಾಯಿಗಳ ದಾಳಿಗಳ ಬಗ್ಗೆ ನಾವು ಆಗಾಗ ಸುದ್ದಿ ಕೇಳುತ್ತಿರುತ್ತೇವೆ. ಬೀದಿನಾಯಿಗಳು ಚಿಕ್ಕಮಕ್ಕಳ ಮೇಲೆರಗಿ ಗಂಭೀರವಾಗಿ ಗಾಯಗೊಳಿಸೋದು, ಪ್ರಾಣ ಹಾನಿ ಮಾಡಿರೋದು ಇದೆ. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಪುಟ್ಟ ಮಗುವೊಂದು ಆಟವಾಡುವ ಸಂದರ್ಭದಲ್ಲಿ ಮನೆಯ ಕಾಂಪೌಂಡ್ ಹಾರಿ ರಸ್ತೆಗೆ ಇಳಿದಿದ್ದು, ಅಲ್ಲೇ ಇದ್ದ ಬೀದಿನಾಯಿಗಳು ಮಗುವಿನ ಮೇಲೆ ದಾಳಿ ಮಾಡಲು ಬಂದಿದೆ. ಮಗು ಬೀದಿನಾಯಿಗಳನ್ನು ಹೆದರಿಸಿ ಓಡಿಸಲು ಯತ್ನಿಸಿತಾದರೂ, ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ಮಗುವನ್ನು ಸುತ್ತುವರಿದ ಕಾರಣ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮಗುವಿನ ಮೇಲೆ ದಾಳಿ ಮಾಡಿದ ನಾಯಿಗಳು ಅದನ್ನು ರಸ್ತೆಯುದ್ದಕ್ಕು ಎಳೆದಾಡಿದೆ. ಮಗುವಿಗೆ ನಾಯಿಗಳ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಸುಮಾರು ನಿಮಿಷಗಳ ಕಾಲ ನಾಯಿಗಳು ಮಗುವಿನ ಮೇಲೆ ಕಚ್ಚಿಕಚ್ಚಿ ಗಾಯಗೊಳಿಸಿದೆ.

ಸ್ವಲ್ಪ ಹೊತ್ತಿನ ಬಳಿಕ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಓಡಿಬಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ನಾಯಿಯ ಹಿಡಿತದಿಂದ ರಕ್ಷಿಸಿದ್ದಾರೆ. ಈ ಎಲ್ಲಾ ದೃಷ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!