ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ರಾಜ್ಯಗಳು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದು, ಪ್ರವಾಹ ಸದೃಶ ಪರಿಸ್ಥಿತಿ ಎದುರಾಗಿದೆ.
ನಮ್ಮ ರಾಜ್ಯದಲ್ಲಿಯೂ ಉತ್ತರ ಕರ್ನಾಟಕ, ಮಲೆನಾಡಿನ ಹಲವು ಭಾಗಗಳು ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಹಲವು ಜಿಲ್ಲೆಗಳು ಪ್ರವಾಹದ ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದೆ. ಪ್ರವಾಹದ ನೀರಿನಲ್ಲಿ ಮನೆಯೊಳಕ್ಕೆ ಹಾವು, ಮೀನು ಹೀಗೆ ಜಲಚರ ಪ್ರಾಣಿಗಳು ನುಗ್ಗೋದನ್ನು ನೋಡಿರುತ್ತೇವೆ.
ಇದೇ ರೀತಿ ಭಾರೀ ಮಳೆಗೆ ಪಶ್ಚಿಮ ಬಂಗಾಳದ ಹಲವು ರಾಜ್ಯಗಳು ತತ್ತರಿಸಿ ಹೋಗಿದ್ದು, ನದಿಯ ನೀರು ಪ್ರವಾಹದ ರೂಪದಲ್ಲಿ ಮನೆಗಳಿಗೆ ನುಗ್ಗಿದೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಮನೆಯೊಂದಕ್ಕೆ ಪ್ರವಾಹದ ನೀರಿನ ಜೊತೆ ಹತ್ತಾರು ಭಾರೀ ಗಾತ್ರದ ಮೀನುಗಳು ಕೂಡ ಹರಿದು ಬಂದಿದೆ.
ಕೆಜಿಗಟ್ಟಲೆ ತೂಗುವ ಹಲವು ಮೀನುಗಳು ಮನೆಯನ್ನು ಪ್ರವೇಶಿಸಿದೆ. ಮನೆಯ ಹಾಲ್ನಿಂದ ಹಿಡಿದು ಅಡುಗೆ ಮನೆಯವರೆಗೆ ಎಲ್ಲು ನೋಡಿದ್ರೂ ಭಾರೀ ಗಾತ್ರದ ಮೀನುಗಳೇ. ಇದನ್ನು ಅಲ್ಲಿನ ಜನ ವಿಡಿಯೋ ತೆಗೆದು ಶೇರ್ ಮಾಡಿದ್ದು, ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,
Watch Video
