fbpx

ಮರಿ ಚಿರತೆಯನ್ನು ಹೊತ್ತೊಯ್ದ ಹದ್ದು, ತಾಯಿ ಚಿರತೆ ಮಾಡಿದ್ದೇನು ನೋಡಿ! ವೈರಲ್ ವಿಡಿಯೋ

ಮಕ್ಕಳೆಂದರೆ ಯಾರಿಗೆ ತಾನೇ ಪ್ರೀತಿಯಿರಲ್ಲ ಹೇಳಿ, ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲಾ ಜೀವಿಗಳು ತಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತವೆ, ತಮ್ಮ ಮಕ್ಕಳಿಗೆ ಸಂಕಷ್ಟ ಎದುರಾದರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸಿಕೊಳ್ಳುತ್ತವೆ.

ಇಲ್ಲೊಂದು ಹದ್ದು ಮರಿಚಿರತೆಯನ್ನು ಹೊತ್ತೊಯ್ದಿತ್ತು. ತಾಯಿಯಿಂದ ಬೇರ್ಪಟ್ಟಿದ್ದ ಮರಿಚಿರತೆಯನ್ನು ಹೊಂಚು ಹಾಕಿ ಬೇಟೆಯಾಡಿದ ಹದ್ದು ಮರದ ಮೇಲೆ ಹೊತ್ತೊಯ್ದು ಅದನ್ನು ತಿನ್ನಲು ಶುರು ಮಾಡಿದೆ.

img 20200825 wa0024486562638068919282

ಕಾಣೆಯಾದ ಮರಿಯ ಹುಡುಕಾಟದಲ್ಲಿದ್ದ ತಾಯಿ ಚಿರತೆಗೆ ತನ್ನ ಮರಿಯನ್ನು ಹದ್ದು ಮರದ ಮೇಲೆ ಹಿಡಿದಿಟ್ಟುಕೊಂಡಿರೋದು ಕಾಣಿಸುತ್ತೆ. ತಕ್ಷಣ ಮರವೇರಿದ ತಾಯಿ ಚಿರತೆ ತನ್ನ ಮರಿಯನ್ನು ರಕ್ಷಿಸಲು ಹದ್ದಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹಾಕುತ್ತದೆ.

ಇದನ್ನೂ ಓದಿ:  ಎರಡು ಮರದ ದಿಣ್ಣೆಗಳ ಮೇಲೆ ಕಾರು ಚಲಾಯಿಸುವ ಸಾಹಸಕ್ಕೆ ಕೈ ಹಾಕಿದ! ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಆದರೆ ಚಿರತೆಯ ದುರಾದೃಷ್ಟಕ್ಕೆ ಮರಿಚಿರತೆಯನ್ನು ಹದ್ದು ಅದಾಗಲೇ ಕೊಂದು ಹಾಕಿತ್ತು. ತಾಯಿ ಚಿರತೆ ತನ್ನ ಮರಿಯ ಮೃತದೇಹದ ಬಳಿ ಕುಳಿತು ಮೂಕರೋಧನೆಯಲ್ಲಿ ತೊಡಗಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ವನ್ಯಜೀವಿಗಳ ಛಾಯಾಚಿತ್ರಗ್ರಾಹಕರು ಈ ಎಲ್ಲಾ ಘಟನೆಯ ವಿಡಿಯೋವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!