fbpx

Please assign a menu to the primary menu location under menu

ಗಣೇಶೋತ್ಸವದ ಮೈಕ್ ತೆಗಿಸಲು ಬಂದ ತಹಶಿಲ್ದಾರ್‌ಗೆ ಹಿಂದೂ ಯುವಕರ ಸವಾಲ್, ಮೊದಲು ಮಸೀದಿ ಮೈಕ್ ತೆಗಿಸಿ ಎಂದ್ರು! ವೈರಲ್ ವಿಡಿಯೋ ನೋಡಿ

ಗಣೇಶ ಚತುರ್ಥಿಯ ಪ್ರಯುಕ್ತ ಭಕ್ತಿಗೀತೆ ಹಾಕಿದ್ದಕ್ಕೆ ರಾತ್ರೋರಾತ್ರಿ ಮೈಕ್ ತೆಗೆಸಲು ಬಂದ ತಹಶೀಲ್ದಾರ್‌ಗೆ ಹಿಂದೂ ಯುವಕರು ತರಾಟೆಗೆ ತೆಗೆದುಕೊಂಡ ಘಟನೆ ದೇವದುರ್ಗ ಪಟ್ಟಣದ ಶಾಂತಿ ನಗರ ಎಂಬಲ್ಲಿ ನಡೆದಿದೆ.

ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವಲ್ಲಿ ಯುವಕರು ಭಕ್ತಿಗೀತೆ ಹಾಕಲು ಮೈಕ್ ಅಳವಡಿಸಿದ್ದಕ್ಕೆ ದೇವದುರ್ಗದ ತಹಶೀಲ್ದಾರ್ ಸಂತೋಷಿ ರಾಣೆ ಯುವಕರ ಮೇಲೆ ಹರಿಹಾಯ್ದಿದ್ದು, ಮೈಕ್ ತೆಗೆಯುವಂತೆ ಆದೇಶಿಸಿದ್ದಾರೆ. ಇದಕ್ಕೆ ಅಲ್ಲಿದ್ದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು, ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬಕ್ಕೂ ತೊಂದರೆ ಕೊಡ್ತೀರಲ್ಲ ಎಂದಿದ್ದಾರೆ.

ವರ್ಷಂಪ್ರತಿ ಮಸೀದಿಯಲ್ಲಿ ಅನದೀಕೃತವಾಗಿ ಮೈಕ್ ಹಾಕಿಕೊಂಡು ನಾಲ್ಕೈದು ಸಲಿ ಆಜಾನ್ ಕೂಗುವುದಕ್ಕೆ ನೀವು ಯಾಕೆ ನಿರ್ಬಂಧ ಹಾಕಲ್ಲ?. ಸುಪ್ರೀಂ ಕೋರ್ಟ್ ಮಸೀದಿಯಲ್ಲಿ ಮೈಕ್ ಬಳಕೆ ಮಾಡಬಾರದು ಎಂದು ಆದೇಶ‌‌ ನೀಡಿರೋದು ಗೊತ್ತಿದೆಯ ನಿಮ್ಗೆ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ನಮ್ಮ ಮೇಲೆ ಕೇಸ್ ಫೈಲ್ ಮಾಡ್ತೀರಾ ಮಾಡಿ, ಗಣೇಶ ಪ್ರತಿಷ್ಠಾಪನೆ ವಿಚಾರವಷ್ಟೇ ನಿಮ್ಮ ಡ್ಯೂಟಿನಾ, ನಿಮಗೆ ಬೇರೆ ಕೆಲಸ ಇಲ್ವಾ, ಆ ಕೆಲಸಗಳನ್ನು ಮೊದಲು ಮಾಡಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕರ ಪ್ರಶ್ನೆಗೆ ಉತ್ತರಿಸಲಾಗದೆ ತಹಶೀಲ್ದಾರ್ ಪೋಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ

ಪೊಲೀಸರ ಬಳಿಯೂ ಅರೆಸ್ಟ್ ವಾರೆಂಟ್ ಕೊಟ್ರೆ ನಾವೆಲ್ಲರೂ ಬರ್ತೇವೆ ಎಂದು ಹೇಳಿದ್ದಾರೆ. ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ ಆಚರಿಸೋಕು ನೀವು ಯಾಕೆ ಅಡ್ಡಿ ಮಾಡೋದು, ನಾವು ನಮ್ಮ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Watch Video

video
error: Content is protected !!