fbpx

ಈ ಹಣ್ಣಿನ ವ್ಯಾಪಾರಿ ಜನರಿಗೆ ಯಾವ ರೀತಿ ಮೋಸ ಮಾಡ್ತಾನೆ ನೋಡಿ (ವೈರಲ್ ವಿಡಿಯೋ)

ಕೆಲವು ವ್ಯಾಪಾರಸ್ಥರು ಜನರನ್ನು ಹೇಗೆಲ್ಲ ಮೋಸಮಾಡುತ್ತಾರೆ ನೋಡಿ. ಒಂದು ಕ್ಷಣ ಮೈ ಮರೆತರೆ ನಾವು ಮೋಸ ಹೋಗುತ್ತೇವೆ, ಅಷ್ಟು ಚಾಲಾಕಿತನ ಅವರಲ್ಲಿರುತ್ತೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವಸ್ತುಗಳನ್ನೇ ಬದಲಾಯಿಸುವ ಚಾಲಾಕಿತನ ಅವರಲ್ಲಿ ಇರುತ್ತೆ.

ವ್ಯಾಪಾರಿಗಳು ಜನರಿಗೆ ಹೇಗೆಲ್ಲಾ ಯಾಮಾರಿಸಿ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೆ ಸಾಕ್ಷಿ. ತಳ್ಳುವ ಗಾಡಿಯಲ್ಲಿ ಹಣ್ಣುಗಳನ್ನು ಮಾರುತ್ತಿದ್ದವನ ಬಳಿ ವ್ಯಕ್ತಿಯೊಬ್ಬ‌ ಹಣ್ಣು ಕೊಳ್ಳೋಕೆ ಬಂದ್ರೆ ವ್ಯಾಪಾರಿ ಹಾಳಾದ ಹಣ್ಣುಗಳನ್ನು ಕೊಡುತ್ತಾನೆ.

ಹಣ್ಣು ಕೊಳ್ಳಲು ಬಂದ ವ್ಯಕ್ತಿ ಒಳ್ಳೆ ಒಳ್ಳೆಯ ಹಣ್ಣುಗಳನ್ನು ಆರಿಸಿ ಪ್ಯಾಕ್ ಮಾಡೋಕೆ ಅಂತ ಕೊಟ್ರೆ ಆ ವ್ಯಾಪಾರಿ ಅದನ್ನು ಕೈಚೀಲದಲ್ಲಿ ಹಾಕಿದಂತೆ ನಾಟಕ ಮಾಡಿ ಪಕ್ಕದಲ್ಲಿ ಹಾಕುತ್ತಿದ್ದ. ಅದರ ಬದಲು ಕೆಟ್ಟುಹೋದ ಹಣ್ಣುಗಳನ್ನು ಕೈಚೀಲದಲ್ಲಿ ತುಂಬುತ್ತಿದ್ದ.

ಇದನ್ನು ಅಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ರೈತರು ಶ್ರಮವಹಿಸಿ ಬೆಳೆದ ತರಕಾರಿಗಳನ್ನು ಅವರಿಂದ ಅರ್ಧ ಬೆಲೆಗೆ ತಂದ ಮಧ್ಯವರ್ತಿಗಳು ತಾವು ಮಾತ್ರ ಮಾರ್ಕೆಟ್ ನಲ್ಲಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಾರೆ.

ಇನ್ನು ಗ್ರಾಹಕರಿಗೆ ತೆಗೆದುಕೊಂಡ ಹಣಕ್ಕೆ ಸರಿಯಾದ ಹಣ್ಣು, ತರಕಾರಿಯನ್ನು ಕೊಡುತ್ತಾರೆ ಅಂದುಕೊಂಡರೆ ಅದು ನಮ್ಮ ಮೂರ್ಖತನ ಎನ್ನಬಹುದು. ಇನ್ನು ಕೆಲವರು ತರಕಾರಿಗಳನ್ನು ಕೊಳಚೆ, ಚರಂಡಿ ನೀರಿನಲ್ಲಿ ತೊಳೆದು ನೋಡೋಕೆ ಸ್ವಚ್ಛವಾಗಿ ಇರುವಂತೆ ಮಾಡಿ ಮಾರಾಟ ಮಾಡುತ್ತಾರೆ.

ಇಂತಹ ತರಕಾರಿಗಳನ್ನು ಕೊಂಡುಕೊಂಡರೆ ರೋಗಗಳೂ ಬರೋದರಲ್ಲಿ ಅನುಮಾನವಿಲ್ಲ. ಇನ್ನು ಕೆಲವೊಂದಿಷ್ಟು ಹಣ್ಣು ತರಕಾರಿಗಳಿಗೆ ರಾಸಾಯನಿಕ ತುಂಬಿದ ಬಣ್ಣಗಳನ್ನು ಹಾಕುವುದು, ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಹೀಗೆ ಜನರಿಗೆ ಮೋಸ ಮಾಡಿ ವ್ಯಾಪಾರ ಮಾಡುವವರು ಇದ್ದಾರೆ. ಇದೀಗ ಹಣ್ಣಿನ ವ್ಯಾಪಾರಿ ಗ್ರಾಹಕನಿಗೆ ಮೋಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!