fbpx

ಯುವತಿಯ ಪರ್ಸ್ ಕದಿಯಲು ಹೋದ್ರು, ಹಿಗ್ಗಾಮುಗ್ಗಾ ಒದೆ ತಿಂದ್ರು! ವೈರಲ್ ವಿಡಿಯೋ ನೋಡಿ

ಕಳ್ಳರು ಹೆಚ್ಚಾಗಿ ಮಹಿಳೆಯರ ಮೇಲೆಯೇ ದಾಳಿ ಮಾಡಿ ಕಳ್ಳತನ ಮಾಡೋದು ಸಾಮಾನ್ಯ. ಅದರಲ್ಲೂ ಸರಗಳ್ಳರು ಮುಖ್ಯವಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸಿಕ್ಕಿದ್ದನ್ನ ದೋಚಿಕೊಂಡು ಹೋಗುತ್ತಾರೆ.

ಮಹಿಳೆಯರು ಗಂಡಸರಿಗಿಂತ ದುರ್ಬಲರು, ತಮ್ಮ ಮೇಲೆ ಪ್ರತಿರೋಧ ತೋರಲ್ಲ ಎಂಬ ಮನೋಭಾವವೇ ಇದಕ್ಕೆ ಕಾರಣ. ಆದರೆ ಇಲ್ಲೊಬ್ಬ ಯುವತಿ ಇಂತಹ ಮನೋಭಾವ ಹೊಂದಿದ್ದ ಕಳ್ಳರಿಗೆ ಮತ್ತೆ ಮಹಿಳೆಯರತ್ತ ತಲೆಹಾಕದ ರೀತಿ ಪಾಠಕಲಿಸಿದ್ದಾಳೆ.

ಯುವತಿಯರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ಬೈಕ್‌ನಲ್ಲಿ ಬಂದ ಯುವಕರು ಅದರಲ್ಲಿ ಒಬ್ಬಾಕೆಯ ಬ್ಯಾಗ್ ಕದಿಯಲು ಯತ್ನಿಸಿದ್ದಾನೆ. ಆದರೆ ಕಳ್ಳನ ಅದೃಷ್ಟ ಕೈಕೊಟ್ಟಿದೆ, ಯುವತಿ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಇಬ್ಬರೂ ಕಳ್ಳರು ರಸ್ತೆಗೆ ಬಿದ್ದಿದ್ದಾರೆ.

ಯುವತಿ ಓಡಿ ಹೋಗಿ ಇಬ್ಬರು ಕಳ್ಳರ ಕಾಲರ್ ಪಟ್ಟಿ ಹಿಡಿದು ಥಳಿಸಿದ್ದಾಳೆ. ಈ ಸಂದರ್ಭದಲ್ಲಿ ಒಬ್ಬಾತ ಬೈಕ್ ಬಿಟ್ಟು ಅಲ್ಲಿಂದ ಎಸ್ಕೇಪ್ ಆದರೆ ಇನ್ನೊಬ್ಬ ಕಳ್ಳ ಮಾತ್ರ ಯುವತಿಯ ಕೈಗೆ ಸರಿಯಾಗೆ ತಗಲಾಕಿಕೊಂಡಿದ್ದಾನೆ.

ಯುವತಿ ತನ್ನ ಕರಾಟೆ ಕಲೆಯನ್ನು ಆತನ ಮೇಲೆ ಪ್ರಯೋಗಿಸಿದ್ದಾಳೆ. ಕೊನೆಗೆ ಅಲ್ಲಿದ್ದ ಜನ ಯುವತಿಯ ಕೈಯಿಂದ ಆತನನ್ನು ಬಿಡಿಸಿದ್ದಾರೆ, ಇಲ್ಲವಾದಲ್ಲಿ ಯುವತಿಯ ಕೈಯಲ್ಲೇ ಹೆಣವಾಗುತ್ತಿದ್ದನೇನೋ.

ಈ ಘಟನೆಯ ವಿಡಿಯೋ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!