fbpx

ಬೈಕ್ ಸ್ಕಿಡ್ ಆಗಿ ಟ್ಯಾಂಕರ್ ಅಡಿಗೆ ಬಿದ್ದ ಯುವಕ, ಬದುಕಿದ್ದೇ ಪವಾಡ! ಶಾಕಿಂಗ್ ವಿಡಿಯೋ ನೋಡಿ

ಅದೃಷ್ಟ ಯಾವಾಗ ನಮ್ಮ ಕೈ ಹಿಡಿಯುತ್ತೆ ಹೇಳೋಕೆ ಆಗಲ್ಲ, ಇಲ್ಲಿ ಈ ಬೈಕ್ ಸವಾರನಿಗೆ ಮಾತ್ರ ಒಳ್ಳೆಯ ಸಮಯದಲ್ಲೇ ಕೈಹಿಡಿದು ಕಾಪಾಡಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ತಿರುವಿನಲ್ಲಿ ಬೈಕ್ ಏಕಾಏಕೀ ಸ್ಕಿಡ್ ಆಗಿ ಬಿದ್ದಿದ್ದು, ಬೈಕ್ ಸವಾರ ಸ್ವಲ್ಪದರಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ತಿರುವಿನಲ್ಲಿ ಯಾವುದೋ ವಾಹನ ಆಯಿಲ್ ಚೆಲ್ಲಿಕೊಂಡು ಹೋಗಿತ್ತೋ ಏನೋ ಬೈಕ್ ಸವಾರ ಬಲಗಡೆ ಗಾಡಿ ತಿರುಗಿಸುತ್ತಿದ್ದಂತೆ ಹಿಡಿತ ಕಳೆದುಕೊಂಡು ಬೈಕ್ ಸಮೇತ ಜಾರಿಕೊಂಡು ರಸ್ತೆಗೆ ಬಿದ್ದಿದ್ದಾನೆ. ಆತನ ದುರಾದೃಷ್ಟಕ್ಕೆ ಅದೇ ಸಮಯದಲ್ಲಿ ಹಿಂದಿನಿಂದ ಟ್ಯಾಂಕರ್ ಬಂದಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಸವಾರ ಜಾರಿಕೊಂಡು ನೇರವಾಗಿ ಟ್ಯಾಂಕರ್ ಚಕ್ರದ ಅಡಿಗೆ ಹೋಗಿದ್ದಾನೆ. ಈ ಸಮಯದಲ್ಲೇ ಅದೃಷ್ಟ ಬೈಕ್ ಸವಾರನ ಕೈ ಹಿಡಿದಿದೆ. ಚಕ್ರದ ಅಡಿಗೆ ಬಿದ್ದು ಪ್ರಾಣ ಕಳೆದುಕೊಳ್ಳೋ ಹೊತ್ತಿಗೆ ಅದ್ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಾನೆ.

ಟ್ಯಾಂಕರ್ ಚಾಲಕ ಬ್ರೇಕ್ ಹಾಕಿದ್ರು ಗಾಡಿ ಸ್ವಲ್ಪ ದೂರ ಹೋಗಿ ನಿಂತಿದೆ, ಇದನ್ನೆಲ್ಲ ನೋಡ್ತಾ ಇದ್ರೆ ಬೈಕ್ ಸವಾರ ಬದುಕಿದ್ದು ಪವಾಡವೇ ಸರಿ. ಈ ಎಲ್ಲಾ ದೃಶ್ಯಗಳು ಅಲ್ಲೇ ಇದ್ದ ಟ್ರಾಫಿಕ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಿದ್ರೆ ಮೈ ನಡುಗಿಸುವಂತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!