fbpx

ಮರಿಗಳ ಜೊತೆ ಬಾತು ಕೋಳಿಯ ಮಾಲ್ ಸುತ್ತಾಟ, ವೈರಲ್ ವಿಡಿಯೋ ನೋಡಿ

ಮಾಲ್‌ಗಳಿಗೆ ಸುತ್ತಾಡೋಕೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ, ಖರೀದಿ ಮಾಡೋಕೆ ಇಲ್ಲದಿದ್ರು ಮಾಲ್‌ಗಳಿಗೆ ರೌಂಡ್ಸ್ ಹೊಡೆದು ಬರುವ ಜನ ತುಂಬಾ ಇದ್ದಾರೆ. ಆದರೆ ಈಗ ಕರೋನಾ ಕಾರಣದಿಂದ ಜನ ಹೊರಗಡೆ ಸುತ್ತಾಡೋದು ಕಡಿಮೆಯಾಗಿದ್ದು, ಮಾಲ್‌ಗಳು ಬಿಕೋ ಅನ್ನುತ್ತಿವೆ.

ಆದರೆ ಇಲ್ಲೊಂದು ಬಾತುಕೊಳಿ ತನ್ನ ಮರಿಗಳ ಜೊತೆ ಮಾಲ್ ಸುತ್ತಾಡೋಕೆ ಬಂದಿದೆ. ಯಾವುದೇ ಭಯವಿಲ್ಲದೆ ಮಾಲ್ ಒಳಕ್ಕೆ ಬಂದ ಬಾತುಕೋಳಿ ಹಾಗೂ ಮರಿಗಳು, ಮಾಲ್‌ನಲ್ಲಿ ಅತ್ತಿಂದಿತ್ತ ಸುತ್ತಾಡಿದೆ. ಅಲ್ಲಿ ಇದ್ದ ಜನರು ಕೂಡ ಬಾತುಕೋಳಿಗೆ ಯಾವುದೇ ರೀತಿಯ ತೊಂದರೆ ನೀಡಲಿಲ್ಲ.

ಬಾತುಕೋಳಿ ಎಸ್ಕಲೇಟರ್ ಬಳಿ ಹೋದಾಗ ಮರಿಗಳಿಗೆ ತೊಂದರೆಯಾಗಬಹುದು ಎಂಬ ಉದ್ದೇಶದಿಂದ ಅಲ್ಲೆ ಇದ್ದ ಮಹಿಳೆಯೊಬ್ಬರು ಅದನ್ನ ತಡೆದಿದ್ದಾರೆ. ನಂತರ ಬಾತುಕೋಳಿ ಅಲ್ಲಿಂದ ಮಾರಾಟ ಮಳಿಗೆಯೊಂದಕ್ಕೆ ಪ್ರವೇಶಿಸಲು ಯತ್ನಿಸಿದೆ.

ಅಲ್ಲಿದ್ದ ಸಿಬ್ಬಂದಿ ಅದನ್ನು ಒಳ ಪ್ರವೇಶಿಸದಂತೆ ನೋಡಿಕೊಂಡಿದ್ದಾರೆ. ಕೊನೆಗೆ ಬಾತುಕೋಳಿ ತನ್ನ ಮರಿಗಳೊಂದಿಗೆ ಮಾಲ್‌ನ ಹಿಂಬಾಗಿಲ ಮೂಲಕ ಹೊರ ಹೋಗಿದೆ. ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ಜನ ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ.

ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಾಲ್‌ನ ಸಿಬ್ಬಂದಿ ಹಾಗೂ ಅಲ್ಲಿದ್ದ ಜನ ಬಾತುಕೋಳಿಯ ಜೊತೆ ನಡೆದುಕೊಂಡ ರೀತಿ ಎಲ್ಲರ ಮೆಚ್ವುಗೆಗೆ ಪಾತ್ರವಾಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!