fbpx

Please assign a menu to the primary menu location under menu

ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸ್ತಾ ಇದ್ರೆ, ಕುಂಟುತ್ತಾ ಬಂದ ಈ ಅಜ್ಜಿ ಮಾಡಿದ್ದೇನು ನೋಡಿ (ವೈರಲ್ ವಿಡಿಯೋ)

ಅಜ್ಜಿಯೊಬ್ಬರ ದೇಶ ಭಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇಳಿವಯಸ್ಸಿನ ಈ ಅಜ್ಜಿ ನಡೆಯಲಾಗದ ಪರಿಸ್ಥಿತಿಯಲ್ಲಿದ್ರೂ, ಕುಂಟುತ್ತಾ ಬಂದು ಧ್ವಜಕ್ಕೆ ವಂದನೆ ಮಾಡಿ ತಮ್ಮ ದೇಶದ ಮೇಲೆ ತನಗಿರುವ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಪೋಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜ ವಂದನೆ ಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿಗೆ ಈ ಅಜ್ಜಿ ಆಗಮಿಸಿದ್ದಾರೆ. ವಂದೇ ಮಾತರಂ ಗೀತೆಯನ್ನು ಹಾಡುತ್ತಾ ಕುಂಟುತ್ತಾ ಬಂದ ಅಜ್ಜಿಯನ್ನು ವ್ಯಕ್ತಿಯೋರ್ವ ಅರ್ಧದಲ್ಲಿಯೇ ತಡೆಯಲು ಯತ್ನಿಸಿದ್ದು, ಅಲ್ಲಿದ್ದ ಇತರರು ಅಜ್ಜಿಯನ್ನು ಒಳ ಬಿಡುವಂತೆ ಹೇಳಿದ್ದಾರೆ.

ಕುಂಟುತ್ತಾ ಬಂದ ಅಜ್ಜಿ ತನ್ನ ಕೈಯಲ್ಲಿದ್ದ ಕೈಚೀಲಗಳನ್ನು ಅಲ್ಲೇ ಒಂದು ಕಡೆ ಇಟ್ಟು ವಂದೇ ಮಾತರಂ ಗೀತೆಯನ್ನು ಹಾಡುತ್ತಾ ಧ್ವಜದ ಕಡೆ ತೆರಳಿದ್ದಾರೆ. ಅಲ್ಲಿ ಹೂವನ್ನು ಕೇಳಿ ಪಡೆದು ಧ್ವಜಕ್ಕೆ ವಂದನೆ ಮಾಡಿ ಅರ್ಪಣೆ ಮಾಡಿದ್ದಾರೆ.

ನಂತರ ಅಲ್ಲೇ ಭೂಮಿತಾಯಿಗೆ ಕೈಮುಗಿದು ಮಣ್ಣು ತೆಗೆದು ಹಣೆಗೆ ಹಚ್ಚಿದ್ದಾರೆ. ಅಲ್ಲಿ ನೆರೆದಿದ್ದ ಪೋಲೀಸರು ಅಜ್ಜಿಗೆ ಚಪ್ಪಾಳೆಯ ಮೂಲಕ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಿಯದು ಎಂದು ತಿಳಿದುಬಂದಿಲ್ಲ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!