fbpx

Please assign a menu to the primary menu location under menu

ಇಳಿವಯಸ್ಸಿನ ಅಜ್ಜಿಯ ನರಕಯಾತನೆ, ಇಂತಹ ಸೊಸೆ ಯಾರಿಗೂ ಸಿಗದಿರಲಪ್ಪ! ಶಾಕಿಂಗ್ ವಿಡಿಯೋ ನೋಡಿ

ಇಳಿವಯಸ್ಸಿನ ಅಜ್ಜಿಯೊಬ್ಬರು ಸೊಸೆಯರಿಂದಲೇ ನರಕಯಾತನೆ ಅನುಭವಿಸುತ್ತಿರುವ ಹೃದಯವಿದ್ರಾವಕ ವಿಡಿಯೋ ವೈರಲ್ ಆಗಿದೆ. 82ವರ್ಷ ಹರೆಯದ ಇಳಿವಯಸ್ಸಿನ ಅಜ್ಜಿಗೆ ರಾಕ್ಷಸಿ ಸೊಸೆಯರೇ ಹಲ್ಲೆನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹರ್ಯಾಣದ ಸೋನಿಪತ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಕೂರಲು ನಿಲ್ಲಲು ಆಗದ ಅಜ್ಜಿಗೆ, ಸೊಸೆ ಪ್ರತಿದಿನ ದೈಹಿಕವಾಗಿ ಹಿಂಸಿಸಿ ಕೆಲಸ ಮಾಡಿಸುತ್ತಿದ್ದಳಂತೆ. ಒಂದು ದಿನ ಕೆಲಸ ಮಾಡೋದು ತಡವಾದರೆ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆನಡೆಸೋದು ಮಾಡ್ತಾ ಇದ್ಲು.

ಅಜ್ಜಿ ಎಲ್ಲಾ ನೋವನ್ನೂ ಸಹಿಸಿಕೊಂಡು ಸುಮ್ಮನಿದ್ಲು ಆದ್ರೆ ಆಕೆಯ ಮೊಮ್ಮಕ್ಕಳಿಗೆ ತಮ್ಮ ತಾಯಿ ಅಜ್ಜಿಗೆ ದಿನಾಲು ಹೊಡೆಯೋದು ನೋಡೋಕೆ ಆಗ್ತಾ ಇರ್ಲಿಲ್ಲ. ಅಜ್ಜಿಗೆ ತಾಯಿ ಹಲ್ಲೆ ನಡೆಸೋದನ್ನ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋನಿಪತ್ ಪೋಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಆರೋಪಿ ಸೊಸೆ ಕೇಸು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾಳೆ. ವೃದ್ಧೆಯ ಮೇಲೆ ಸೊಸೆ ಹಲ್ಲೆ ನಡೆಸುವ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!