fbpx

ನೋಡನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಯಿತು ಲಾರಿ, ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ

ಚಾಲಕನ ಹುಚ್ಚುತನಕ್ಕೆ ಟ್ರಕ್ ಒಂದು ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ವಿಡಿಯೋ‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಬಾನ್ಸ್‌ವಾರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಭಾರೀ ಮಳೆಯಿಂದಾಗಿ ಉಕ್ಕಿಹರಿಯುತ್ತಿದ್ದ ಸೇತುವೆಯ ಮೇಲೆ ಲಾರಿ ಚಾಲಕ ಲಾರಿಯನ್ನು ದಾಟಿಸಲು ನೋಡಿದ್ದಾನೆ.

ಮಳೆ ನೀರು ರಭಸವಾಗಿ ಸೇತುವೆ ಮೇಲೆ ಹರಿಯುತ್ತಿದ್ದರೂ ಚಾಲಕ ಅದರ ಕಡೆ ಗಮನ ಕೊಡದೆ ಲಾರಿಯನ್ನು ವೇಗವಾಗಿ ಚಲಾಯಿಸಿ ಸೇತುವೆ ದಾಟಲು ಪ್ರಯತ್ನಿಸಿದ್ದಾನೆ. ಆದರೆ ನೀರಿನ ಹೊಡೆತಕ್ಕೆ ಲಾರಿ ನಿಯಂತ್ರಣ ನದಿಯತ್ತ ವಾಲಿದೆ, ಪ್ರವಾಹದ ನೀರಿನ ಹರಿತ ಜೋರಿದ್ದ ಕಾರಣ ನೋಡನೋಡುತ್ತಿದ್ದಂತೆ ಲಾರಿ ಸೇತುವೆಯಿಂದ ಉರುಳಿ ನೀರಿಗೆ ಬಿದ್ದಿದೆ.


Continue Reading

img 20200823 wa00104123842965605376500

ಸೇತುವೆ ಈ ಬದಿಯಲ್ಲಿದ್ದ ಜನರು ಘಟನೆಯ ಸಂಪೂರ್ಣ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಲಾರಿ ನೀರಿನಲ್ಲಿ ಕೊಚ್ಚಿ ಹೋಗೋದನ್ನ ಕಾಣಬಹುದಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಲಾರಿಯಿಂದ ಹೊರಬಂದು ಈಜಿ ದಡ ಸೇರಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:  ಮನೆ ದೋಚಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್! ವೈರಲ್ ವಿಡಿಯೋ ನೋಡಿ

ರಾಜಸ್ಥಾನದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. ಈಗಾಗಲೇ ಪ್ರವಾಹಕ್ಕೆ ಸಿಲುಕಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಜರುಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!