fbpx

Please assign a menu to the primary menu location under menu

ನಸೀಬು ಅಂದ್ರೆ ಇದೇ ನೋಡಿ, ಸ್ವಲ್ಪ ಮಿಸ್ ಆಗಿದ್ರೂ ಈ ವ್ಯಕ್ತಿ ದೇವರಪಾದ ಸೇರ್ಕೋತಾ ಇದ್ದ! ವೈರಲ್ ವಿಡಿಯೋ ನೋಡಿ

ಅದೃಷ್ಟ ಯಾವಾಗ ನಮ್ಮ ಕೈ ಹಿಡಿಯುತ್ತೆ ಹೇಳೋಕೆ ಆಗಲ್ಲ, ಇಲ್ಲಿ ಈ ವ್ಯಕ್ತಿಗೆ ಮಾತ್ರ ಒಳ್ಳೆಯ ಸಮಯದಲ್ಲೇ ಕೈಹಿಡಿದು ಕಾಪಾಡಿದೆ. ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸ್ವಲ್ಪದರಲ್ಲೇ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ವ್ಯಕ್ತಿಯೊಬ್ಬರು ಒಂದು ಕೈಯಲ್ಲಿ ಬ್ಯಾಗ್ ಇನ್ನೊಂದು ಕೈಯಲ್ಲಿ ಕೋಲು ಹಿಡಿದುಕೊಂಡು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ರು. ಯಾವುದೋ ಆಲೋಚನೆಯಲ್ಲಿದ್ದ ವ್ಯಕ್ತಿಗೆ ತಾನು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದೇನೆ, ಇದರಿಂದ ಅಪಾಯವಾಗಬಹುದು ಎಂಬ ಚಿಂತೆಯೇ ಇರಲಿಲ್ಲ.

ಪಕ್ಕದಲ್ಲಿ ನಡೆದುಕೊಂಡು ಹೋಗಲು ಸಾಕಷ್ಟು ಜಾಗ ಇದ್ರೂ ಈ ವ್ಯಕ್ತಿ ಮಾತ್ರ ರಸ್ತೆಯ ಮೇಲೆಯೇ ನಡೆದುಕೊಂಡು ಸಾಗುತ್ತಿದ್ದ. ಇದೆ ಸಂದರ್ಭದಲ್ಲಿ ಹಿಂದಿನಿಂದ ಬಂದ ವೇಗವಾಗಿ ಬಂದ ಪಿಕಪ್ ವಾಹನದ ಚಾಲಕನ ನಿಯಂತ್ರಣ ತಪ್ಪಿದ್ದು, ಎದುರಿನಿಂದ ಬರುತ್ತಿದ್ದ ಟೆಂಪೋಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಎಡಗಡೆಗೆ ತಿರುಗಿಸಿದ್ದಾನೆ.

ವಾಹನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಪಕ್ಕದಲ್ಲಿಯೇ ಸರಿದುಹೋಗಿದ್ದು, ವ್ಯಕ್ತಿಗೆ ಇದರ ಅರಿವಾಗಿದ್ದು ವಾಹನ ಮುಂದಕ್ಕೆ ಸಾಗಿ ಹೋದ‌ ಮೇಲೆಯೇ. ಪಿಕಪ್ ವಾಹನ ಮರಕ್ಕೆ ಬಡಿದು ಮುಂದಕ್ಕೆ ಹೋಗಿದೆ. ಆಮೇಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಪ್ರಾಣಭಯದಿಂದ ಹಿಂದಕ್ಕೆ ಓಡಿ ಬಂದಿದ್ದಾನೆ.

ಕ್ಷಣ ಮಾತ್ರದಲ್ಲಿ ಜರುಗಿದ ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡಿದವರಿಗೆ ಒಂದು ಸಲಿ ಮೈ ಜುಮ್ ಎನ್ನದೆ ಇರದು. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!