fbpx

Please assign a menu to the primary menu location under menu

ಕರಾವಳಿಯಲ್ಲಿ ಪಕೃತಿದತ್ತವಾಗಿ ಅವತಾರವೆತ್ತಿದ ಗಣಪ, ವೈರಲ್ ಆಯ್ತು ವಿಡಿಯೋ

ಹಿಂದೂಗಳ ಆರಾಧ್ಯ ದೈವ ಗಣಪತಿಯ ಹಬ್ಬವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕರೋನಾ ಕಾರಣದಿಂದ ಈಸಲಿ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ನಿರ್ಬಂಧಗಳು ಇದ್ರೂ, ಹಿಂದೂ ಬಾಂಧವರು ತಮ್ಮತಮ್ಮ ಮನೆಗಳಲ್ಲಿಯೇ ಹಬ್ಬವನ್ನು ಆಚರಿಸುತ್ತಿದ್ದಾರೆ.

ಇದೀಗ ಪ್ರಕೃತಿಯಲ್ಲಿ ಮೂಡಿದ ಗಣಪನ ಅವತಾರದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣೇಶ ಚತುರ್ಥಿಯಂದು ಪ್ರಕೃತಿಯಲ್ಲೇ ಕಂಡ ಗಣಪತಿಯ ರೂಪವನ್ನು ಹವ್ಯಾಸಿ ಛಾಯಾಗ್ರಾಹಕ ವಿಶಾಲ್ ವಾಮಂಜೂರು ಅವರು ಸೆರೆಹಿಡಿದಿದ್ದು, ಫೋಟೋಗಳು ಇದೀಗ ವೈರಲ್ ಆಗಿದೆ.

ಮಂಗಳೂರಿನ ಹೊರವಲಯದ ವಾಮಂಜೂರಿನ ಕೆತ್ತಿಕಲ್‌‌ನಲ್ಲಿ ಪ್ರಕೃತಿದತ್ತ ಗಣಪ ಕಂಡುಬಂದಿದ್ದು, ಈಂದು ಮರದ ಮೇಲೆ ಪೊದೆ ಬಳ್ಳಿಗಳು ಬೆಳೆದು ಈ ಪ್ರಕೃತಿ ಗಣಪ ರೂಪುಗೊಂಡಿದ್ದಾನೆ. ವಿಶಾಲ್ ಅವರು ತೆಗೆದ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರಕೃತಿ ಗಣಪನ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ.

ಇದೀಗ ಈ ಪ್ರಕೃತಿ ಗಣಪನ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿದ್ದು, ಜನರು ಪ್ರಕೃತಿ ಗಣಪನಿಗೆ ನಮಿಸುತ್ತಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!