ಗರ್ಭಿಣಿ ಮಹಿಳೆಯೊಬ್ಬಳು ಜೈಲಿನಲ್ಲಿದ್ದ ತನ್ನ ಪತಿಯನ್ನು ಭೇಟಿಯಾಗಲು ಬಂದು ತಾನೂ ಜೈಲುಪಾಲಾಗಿದ್ದಾಳೆ. ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ತನ್ನ ಪತಿಯನ್ನು ಭೇಟಿಯಾಗಲು ಗರ್ಭಿಣಿ ಮಹಿಳೆ ಜೈಲಿಗೆ ಬಂದಿದ್ದಾಳೆ. ಜೈಲಿನ ಗಾರ್ಡ್ಗಳಿಗೆ ಈಕೆಯ ವರ್ತನೆ ನೋಡಿ ಅನುಮಾನ ಬಂದು ಪರಿಶೀಲನೆ ನಡೆಸಿದ್ದಾರೆ.
ಇನ್ನೇನು ಆಕೆ ಹಾಕಿಕೊಂಡಿದ್ದ ಜಾಕೆಟ್ ತೆಗೆಸುತ್ತಿದ್ದಂತೆ ಆಕೆ ಗರ್ಭಿಣಿಯೇ ಅಲ್ಲ ಎಂಬುದು ಪೋಲೀಸರಿಗೆ ಅರಿವಾಗಿದೆ. ಆಕೆ ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಗರ್ಭಿಣಿಯ ವೇಷ ಧರಿಸಿ ಬಂದಿದ್ದು ಪೋಲೀಸರ ಕೈಗೆ ತಗಲಾಕಿಕೊಡಿದ್ದಾಳೆ.
ಘಟನೆ ನಡೆದಿರೋದು ಬ್ರೆಜಿಲ್ನಲ್ಲಿ. 22 ವರ್ಷದ ಯುವತಿ ಗರ್ಭಿಣಿಯಂತೆ ವೇಷ ಧರಿಸಿ ಜೈಲಿನಲ್ಲಿರುವ ಪತಿಯನ್ನು ಭೇಟೆಯಾಗಲು ಬಂದಿದ್ದಾಳೆ. ಬ್ರೆಜಿಲ್ನಲ್ಲಿ ತಮ್ಮವರನ್ನು ಭೇಟಿಯಾಗಲು ಬರುವ ಗರ್ಭಿಣಿ ಮಹಿಳೆಯರಿಗೆ ಯಾವುದೇ ಸ್ಕ್ಯಾನ್ ಮಾಡಲಾಗುವುದಿಲ್ಲ. ಇದು ಯುವತಿ ಮೊದಲೇ ತಿಳಿದಿತ್ತೇನೋ, ಆದರೆ ಆಕೆಯ ನಡವಳಿಕೆ ಪೋಲೀಸರಿಗೆ ಅನುಮಾನ ತರಿಸಿದೆ.
ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆದರೆ ಆಕೆ ಧರಿಸಿದ್ದ ಬಟ್ಟೆ ಬಿಚ್ಚಿಸಿ ನೋಡಿದ ಪೋಲೀಸರಿಗೆ ಶಾಕ್ ಕಾದಿತ್ತು. ಆಕೆಯ ಹೊಟ್ಟೆಯ ಭಾಗದಲ್ಲಿ 12ಮೊಬೈಲ್ ಫೋನ್ಗಳು ಮತ್ತು ಆವಕ್ಕೆ ಸೇರಿದ ಚಾರ್ಜರ್ಗಳು, ಇಯರ್ ಫೋನ್ಗಳು, ಸಿಮ್ ಕಾರ್ಡ್ಗಳು, ಡ್ರಗ್ಸ್ ಮಾತ್ರೆಗಳು, ಹಣ ಮತ್ತು ಒಂದು ಸುತ್ತಿಗೆಯೂ ಸೇರಿತ್ತು.
ಸುಳ್ಳು ದಾಖಲೆಗಳ ಸೃಷ್ಟಿ, ಜೈಲಿನೊಳಕ್ಕೆ ನಿಷೇಧಿತ ವಸ್ತುಗಳ ಸಾಗಾಣೆ ಆರೋಪದ ಮೇಲೆ ಆಕೆಯನ್ನು ಬಂಧಿಸಿದ ಪೋಲೀಸರು ಕೇಸು ದಾಖಲಿಸಿ ಜೈಲಿಗಟ್ಟಿದ್ದಾರೆ. ಗಂಡನಿಗೆ ಸಹಾಯ ಮಾಡಲು ಹೋಗಿ ಹೆಂಡತಿಯೂ ಜೈಲುಪಾಲಾಗಿದ್ದಾಳೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,