fbpx

ಮೂರನೇ ಮಹಡಿಯ ಕಿರಿದಾದ ಜಾಗದಲ್ಲಿ ಮಗು ಹೇಗೆ ನಡೆದಾಡುತ್ತಿದೆ ನೋಡಿ, ಎದೆ ನಡುಗಿಸುವ ಭಯಾನಕ ವೀಡಿಯೋ

ಸಣ್ಣ ಮಕ್ಕಳ ಮೇಲೆ ನಿಗಾವಹಿಸೋದು ಹೆತ್ತವರ ಕರ್ತವ್ಯ. ವಯಸ್ಸು ಸಣ್ಣದಾಗಿರೋದರಿಂದ ಯಾವುದರಿಂದ ತಮಗೆ ಅಪಾಯವಿದೆ ಎಂಬ ಬಗ್ಗೆ ಪುಟ್ಟ ಮಕ್ಕಳಿಗೆ ತಿಳಿದಿರೋದಿಲ್ಲ. ಕೆಲವೊಮ್ಮೆ ಹೆತ್ತವರ ನಿರ್ಲಕ್ಷ್ಯ, ಮಕ್ಕಳ ಪ್ರಾಣಕ್ಕೆ ಅಪಾಯವೊಡ್ಡಿರುವ ಘಟನೆಗಳೂ ನಡೆದಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಶೇರ್ ಮಾಡಿರುವ ಈ ವಿಡಿಯೋ ಭಯಾನಕ ವಿಡಿಯೋ ಸಂಚಲನವನ್ನೇ ಸೃಷ್ಟಿಸಿದೆ. ಪುಟ್ಟ ಮಗುವೊಂದು ಮೂರನೇ ಮಹಡಿಯ ಕಿರಿದಾದ ಜಾಗದಲ್ಲಿ ಓಡಾಡುವ ವಿಡಿಯೋ ಇದಾಗಿದೆ.

ಸ್ಪೈನ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಪುಟ್ಟ ಮಗು ಮೂರನೇ ಮಹಡಿಯಲ್ಲಿರುವ ಕಿಟಕಿಯ ಸ್ಲೈಡಿಂಗ್ ಡೋರ್ ತೆಗೆದು ಹೊರಬಂದು ಕಿರಿದಾದ ಜಾಗದಲ್ಲಿ ಓಡಾಡುತ್ತಿರೋದನ್ನ ಈ ವಿಡಿಯೋದಲ್ಲಿ ಕಾಣಬಹುದು.

ಇಕ್ಕಟ್ಟಿನ ಜಾಗದಲ್ಲಿ ಮಗು ಓಡಾಡೋದನ್ನ ನೋಡಿದವರಿಗೆ ಎದೆನಡುಗಿದ ಅನುಭವವಾಗದೆ ಇರದು. ಮಗು ಸ್ವಲ್ಪ ಆಚೀಚೆ ಆಯತಪ್ಪಿದ್ರೂ ಕೆಳಕ್ಕೆ ಬೀಳುವ ಸಂಭವವಿತ್ತು, ದೇವರ ದಯೆಯಿಂದ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಪುಟ್ಟ ಮಕ್ಕಳಿರುವ ಕಟ್ಟಡಗಳ ಕಿಟಕಿಗಳಿಗೆ ಕಬ್ಬಿಣದ ತಡೆ ಹಾಕಿದ್ರೆ ಇಂತಹ ಘಟನೆ ಆಗೋದನ್ನು ತಪ್ಪಿಸಬಹುದಾಗಿದೆ. ಸದ್ಯ ವಿಡಿಯೋ ನೋಡಿದ ಅನೇಕರು ಆ ಮಗುವಿನ ಹೆತ್ತವರ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ, ಇನ್ನು ಕೆಲವರು ಮಗುವಿನ ಧೈರ್ಯವನ್ನು ಹೊಗಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!