fbpx

Please assign a menu to the primary menu location under menu

ದೆಹಲಿಯಲ್ಲಿ ಪೋಲೀಸ್ ಹಾಗೂ ಐಸಿಸ್ ಉಗ್ರರ ನಡುವೆ ಗುಂಡಿನ ಚಕಮಕಿ

ದೆಹಲಿಯಲ್ಲಿ ನಿನ್ನೆ ತಡರಾತ್ರಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಐ’ಸಿಸ್ ಉಗ್ರನನ್ನು ಬಂಧಿಸಲಾಗಿದೆ. ಉ’ಗ್ರನ ಬಗ್ಗೆ ಖಚಿತ ಮಾಹಿತಿ ಪಡೆದ ಪೋಲೀಸರು ಆತನ ಬಂಧನಕ್ಕೆ ತೆರಳುತ್ತಿದ್ದಂತೆ ಆತ ಪೋಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಪೋಲೀಸ್ ಹಾಗೂ ಐ’ಸಿಸ್ ಉ’ಗ್ರನ ನಡುವೆ ಗುಂಡಿನ ಚಕಮಕಿ ನಡೆದಿದೆ. ಕೊನೆಗೂ ಪೋಲೀಸರು ಉ’ಗ್ರನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಉತ್ತರಪ್ರದೇಶ ಮೂಲದ ಅಬು ಯೂಸುಫ್ ಎಂದು ತಿಳಿದುಬಂದಿದ್ದು, ದೆಹಲಿಯಲ್ಲಿ ರ’ಕ್ತಪಾತ ಮಾಡಲು ತಯಾರಿ ನಡೆಸುತ್ತಿದ್ದ.

ಆತನ ಬಳಿ ಬಾಂಬ್ ಸ್ಫೋಟಕ್ಕೆ ಬಳಸುವ ಐಇಡಿ ಹಾಗೂ ಎರಡು ಪಿಸ್ತೂಲ್‌ಗಳು ಸಿಕ್ಕಿದೆ. ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದ ರಕ್ತಪಾತಕ್ಕೆ ರೂಪಿಸಲಾಗಿದ್ದ ಸಂಚನ್ನು ಭದ್ರತಾಪಡೆ ವಿಫಲಗೊಳಿಸಿದೆ.

ಉ’ಗ್ರ ಈಗಾಗಲೇ ದೆಹಲಿಯ ಪ್ರಮುಖ ನಗರಗಳಿಗೆ ಭೇಟಿನೀಡಿ ದಾಳಿಗೆ ಸಿದ್ದತೆ ನಡೆಸಿದ್ದ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಉ’ಗ್ರ ಡಾಕ್ಟರ್‌ನನ್ನು ಬಂಧಿಸಲಾಗಿತ್ತು.

ಈತ ಸಿರಿಯಾಗೆ ತೆರಳಿ ಐಸಿಸ್ ಉ’ಗ್ರರ ಜೊತೆ ಸಂಪರ್ಕ ಬೆಳೆಸಿದ್ದ ಅಲ್ಲದ ಅವರಿಗಾಗಿ ಅಪ್ಲುಕೇಶನ್‌ಗಳನ್ನೂ ಅಭಿವೃದ್ಧಿ ಪಡಿಸಿದ್ದ. ಭಾರತದಲ್ಲಿ ಇ’ಸ್ಲಾಮಿಕ್ ಆಡಳಿತ ಸ್ಥಾಪಿಸೋದೆ ಇವರ ಗುರಿ ಎಂದು ಈ ಹಿಂದೆ ಬಂಧಿತರಾಗಿದ್ದ ಉಗ್ರರು ತನಿಖೆ ಸಂದರ್ಭದಲ್ಲಿ ಬಾಯಿಬಿಟ್ಟಿದ್ದರು.

Watch Video

error: Content is protected !!