fbpx

Please assign a menu to the primary menu location under menu

ಸುಮ್ಮನಿದ್ದ ಕೋತಿಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ ಶ್ವಾನಗಳು, ವೈರಲ್ ವಿಡಿಯೋ ನೋಡಿ

ಕೋತಿಯನ್ನು ಕೆಣಕಲು ಹೋಗಿ ಶ್ವಾನಗಳು ಪೇಚಿಗೆ ಸಿಲುಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರದ ಮೇಲೆ ತನ್ನಷ್ಟಕ್ಕೆ ತಾನು ಕೂತಿದ್ದ ಕೋತಿಯನ್ನು ಶ್ವಾನಗಳು ಅಟ್ಟಿಸಿಕೊಂಡು ಬಂದು ನೀರಿಗೆ ಬೀಳಿಸಿದೆ.

ನೀರಿಗೆ ಬಿದ್ದ ಕೋತಿಯನ್ನು ಕೂಡ ಶ್ವಾನಗಳು ಸುಮ್ಮನೆ ಬಿಡದೆ ಅದರ ಮೇಲೆ ಬೊಗಳುತ್ತಾ ದಾಳಿ ಮಾಡಲು ಮುಂದಾಗಿದೆ. ಕೋತಿ ಎಷ್ಟೇ ಪ್ರಯತ್ನ ಪಟ್ಟರು ಶ್ವಾನಗಳು ಅದನ್ನು ನೀರಿನಿಂದ ಮೇಲಕ್ಕೆ ಬರಲು ಬಿಡಲಿಲ್ಲ.

ಕೊನೆಗೆ ಶ್ವಾನಗಳು ನೀರಿಗೆ ಇಳಿದು ಕೋತಿಯ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಸಿಟ್ಟಿಗೆದ್ದ ಕೋತಿ ನೀರಿನಲ್ಲಿದ್ದ ಶ್ವಾನದ ಮೇಲೆ ಹಾರಿ ಕೂತು ನೀರಿನಲ್ಲಿ ಮುಳಿಗಿಸಿ ಸರಿಯಾಗೇ ಸೇಡು ತೀರಿಸಿಕೊಂಡಿದೆ.

ಕೋತಿ ಒಂದು ಶ್ವಾನವನ್ನು ನೀರಿನಲ್ಲಿ ಮುಳುಗಿಸುತ್ತಿದ್ದಂತೆ ಇನ್ನೊಂದು ಶ್ವಾನ ಅದರ ರಕ್ಷಣೆಗೆ ಧಾವಿಸಿದ್ದು, ಅದನ್ನೂ ಕೋತಿ ನೀರಿನಲ್ಲಿ ಮುಳುಗಿಸಿದೆ. ಕೊನೆಗೆ ಹೇಗೋ ಕೋತಿಯ ಕೈಯಿಂದ ತಪ್ಪಿಸಿಕೊಂಡ ಶ್ವಾನಗಳು ನೀರಿನಿಂದ ಮೇಲೆ ಬಂದು ತಪ್ಪಿಸಿಕೊಂಡು ಓಡಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!