fbpx

ಬೈಕ್‌ನಲ್ಲಿ ಬಂದು ಕಾರು ಅಡ್ಡಹಾಕಿ ದರೋಡೆ ಮಾಡಿದ್ರು, ಕಾರು ಚಾಲಕ ಮಾಡಿದ್ದೇನು ನೋಡಿ! ವೈರಲ್ ವಿಡಿಯೋ

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆ ಮಧ್ಯೆಯೇ ಕಾರನ್ನು ಅಡ್ಡ ಹಾಕಿ ದರೋಡೆಗೆ ಯತ್ನಿಸಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗನ್ ತೋರಿಸಿ ಕಾರು ಚಾಲಕನನ್ನು ತಡೆದಿದ್ದಾರೆ.

ಜೀವ ಬೆದರಿಕೆಯಿಂದ ಕಾರು ಚಾಲಕ ಕಾರು ತಡೆದಿದ್ದು, ಇಬ್ಬರು ದುಷ್ಕರ್ಮಿಗಳು ಕಾರಿನ ಬಾಗಿಲು ತೆರೆದು ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದಾರೆ. ದುಷ್ಕರ್ಮಿಗಳು ಇನ್ನೇನು ಕಾರಿನಲ್ಲಿ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಕಾರು ಚಾಲಕ ತನ್ನ ಕಾರನ್ನು ಬೈಕ್‌ಗೆ ತೆಗೆದುಕೊಂಡು ಹೋಗಿ ಗುದ್ದಿದ್ದಾನೆ.

ಕಾರು ಚಾಲಕ ಗುದ್ದಿದ ರಭಸಕ್ಕೆ ಬೈಕ್ ಸವಾರರು ಬೈಕ್ ಸಮೇತ ಅಪ್ಪಚ್ಚಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಕಾರು ಚಾಲಕನ ಸಮಯಪ್ರಜ್ಞೆಗೆ ಜನ ಶಭಾಶ್ ಎಂದಿದ್ದು, ಮಾಡಿದ ತಪ್ಪಿಗೆ ಕಳ್ಳರಿಗೆ ಕೆಲವೇ ಕ್ಷಣಗಳಲ್ಲಿ ತಕ್ಕ ಶಿಕ್ಷೆ ಸಿಕ್ಕಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

error: Content is protected !!