fbpx

Please assign a menu to the primary menu location under menu

ಹಾಲಿಗೆ ಎಂಜಲು ಮಿಶ್ರಣ ಮಾಡಿ ಊರಿಗೆಲ್ಲಾ ಹಂಚ್ತಾ ಇತ್ತು ಮ’ಹಮ್ಮದ್ ಸುಹೈಲ್ ಗ್ಯಾಂಗ್, ಶಾಕಿಂಗ್ ವಿಡಿಯೋ ನೋಡಿ

ಹೈದರಾಬಾದ್‌ನ ದಬಿರ್‌ಪುರದಲ್ಲಿ ಡೈರಿ ಫಾರ್ಮ್‌ ನಡೆಸುವ ಮ’ಹಮ್ಮದ್ ಸುಹೈಲ್‌ನನ್ನು ಪೋಲೀಸರು ಎತ್ತಾಕಿಕೊಂಡು ಹೋಗಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ವೈರಲ್ ಆಗುತ್ತಿರುವ ಆ ಒಂದು ವೀಡಿಯೋ.

ದಬಿಪುರದಲ್ಲಿರುವ ಜಹಾಂಗೀರ್ ಮಿಲ್ಕ್ ಫಾರ್ಮ್‌ ಗೆ ಸಂಬಂಧಿಸಿದ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಹಾಲಿಗೆ ಎಂಜಲು ಮಾಡಿ ನಂತರ ಅಲ್ಲೇ ದನಗಳನ್ನು ತೊಳೆಯಲು, ಅವಕ್ಕೆ ಕುಡಿಸಲು ಬಳಸುವ ನೀರನ್ನು ಹಾಲಿಗೆ ಮಿಶ್ರಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಹಾಲಿನ ಡೈರಿಯ ಮೇಲ್ಬಾಗದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಕೆಲವರು ಈ ವಿಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದು, ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.

ಇದೀಗ ಡೈರಿ ಮಾಲೀಕ ಮಹಮ್ಮದ್ ಸುಹೈಲ್ ಹಾಗೂ ಅಲ್ಲಿ ಕೆಲಸ ಮಾಡುವ ಇನ್ನಿಬ್ಬರ ಮೇಲೆ ಕೇಸು ದಾಖಲಿಸಲಾಗಿದ್ದು, ಡೈರಿಮಾಲೀಕನನ್ನು ಪೋಲೀಸರು ಬಂಧಿಸಿದ್ದಾರೆ. ಆತನ ಮೇಲೆ ಭಾರತೀಯ ದಂಡ ಸಂಹಿತೆ 269, 272, 273 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಡಿಯೋದಲ್ಲಿ ಕಾಣುವ ವ್ಯಕ್ತಿ ಸೇರಿ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆಬೀಸಲಾಗಿದೆ. ಡೈರಿ ಫಾರ್ಮ್‌ ಅನ್ನು ಪೋಲೀಸರು ಸೀಲ್ ಮಾಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!