fbpx

ನಡು ರಸ್ತೆಯಲ್ಲಿಯೇ ಬದ್ಧ ವೈರಿಗಳ ಕಾಳಗ, ಗೆದ್ದಿದ್ಯಾರು ಗೊತ್ತೇ? ನೋಡಿ ವೈರಲ್ ವಿಡಿಯೋ

ಹಾವು-ಮುಂಗುಸಿಯನ್ನು ಬದ್ಧ ವೈರಿಗಳೆಂದೇ ಕರೆಯಲಾಗುತ್ತೆ. ಎಲ್ಲಾದ್ರೂ ಜಗಳ ಬೀದಿಗೆ ಬಂದ್ರೆ ಯಾಕಪ್ಪ ಯಾವಾಗ್ಲೂ ಹಾವು-ಮುಂಗುಸಿ ತರ ಕಿತ್ತಾಡ್ತೀರಪ್ಪಾ ಅಂತ ದೊಡ್ಡವರು ಬುದ್ಧಿಮಾತು ಹೇಳೊದನ್ನು ಕೇಳಿದ್ದೀವಿ.

ಆದ್ರೆ ಹಾವು-ಮುಂಗುಸಿ ಹೇಗೆ ಕಿತ್ತಾಡುತ್ತವೆ ಅನ್ನೋದನ್ನು ಸಾಮಾನ್ಯವಾಗಿ ಹೆಚ್ಚಿನವರು ನೋಡಿರಲ್ಲ. ಇದೀಗ ಹಾವು, ಮುಂಗುಸಿ ಕಾಳಗ ಮಾಡಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ವಾಹನಗಳು ಓಡಾಡುವ ರಸ್ತೆ ಮಧ್ಯದಲ್ಲಿಯೇ ಹಾವು ಮುಂಗುಸಿ ಕಾಳಗಕ್ಕಿಳಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ. ನಡು ರಸ್ತೆಯಲ್ಲಿ ಹಾವು-ಮುಂಗುಸಿ ಕಾದಾಡುತ್ತಿದ್ದರೆ, ಅಲ್ಲೇ ನಿಂತಿದ್ದ ವಾಹನ ಸವಾರರು ನಮಗ್ಯಾಕಪ್ಪ ಬೇಕು ಉಸಾಬರಿ ಎಂದು ಅದರ ತಂಟೆಗೆ ಹೋಗದೆ, ಅದರ ಪಾಡಿಗೆ ಅದನ್ನು ಬಿಟ್ಟು ಕಾದಾಡುವ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಕಾದಾಟದ ಕೊನೆಯಲ್ಲಿ ಹಾವು ಮುಂಗುಸಿಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿತಾದರು ಮುಂಗುಸಿ ಅದನ್ನು ಬೆನ್ನತ್ತಿ ಅದರ ತಲೆಯನ್ನು ಕಚ್ಚಿ ಎಳೆದುಕೊಂಡು ಕಾಡಿನೊಳಗೆ ಓಡಿದೆ. ಐಎಫ್‌ಎಸ್ ಅಧಿಕಾರಿ ಡಾ.ಅಬ್ದುಲ್ ಕಯೂಮ್ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ವೈರಲ್ ವಿಡಿಯೋ ನೋಡಿ,

Watch Video

video

error: Content is protected !!