fbpx

ಸ್ಯಾಂಪಲ್ಲೇ ಕೊಟ್ಟಿಲ್ಲ, ಆಸ್ಪತ್ರೆಯಿಂದ ಬಂತು ಕರೋನಾ ಪಾಸಿಟಿವ್ ರಿಪೋರ್ಟ್! ಶಾಕಿಂಗ್ ವಿಡಿಯೋ ನೋಡಿ

ಕರೋನಾ ಸಾಂಕ್ರಾಮಿಕ ರೋಗಕ್ಕೆ ದೇಶವೇ ತತ್ತರಿಸಿಹೋಗಿದೆ, ಈ ಮಧ್ಯೆ ಕರೋನಾ ಹೆಸರಲ್ಲಿ ಕೆಲವು ಆಸ್ಪತ್ರೆಗಳು, ಲ್ಯಾಬ್ ಗಳು ದುಡ್ಡು ಮಾಡುತ್ತಿದೆ ಎಂಬ ಆರೋಪವೂ ದಟ್ಟವಾಗಿ ಕೇಳಿ ಬರುತ್ತಿದೆ.

ಇದೀಗ ಇದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ವೈರಲ್ ಆಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಕರೋನಾ ಟೆಸ್ಟ್ ಮಾಡಿಸಲು ಆಸ್ಪತ್ರೆಗೆ ತೆರಳಿ ಅದಕ್ಕೆ ಸಂಬಂಧಿಸಿದ ಫಾರ್ಮ್ ಫಿಲ್ ಮಾಡಿದ್ದಾರೆ. ಆದರೆ ಸ್ಯಾಂಪಲ್ ನೀಡಲು ಸಾಧ್ಯವಾಗದ ಕಾರಣ ಹಿಂದುರಿಗಿದ್ದರು.

ಇದಾದ ಬಳಿಕ ರಜಾದ ಮೇಲೆ ಊರಿಗೆ ತೆರಳಿದ್ದ ಅವರಿಗೆ ಶಾಕ್ ಕಾದಿತ್ತು. ಆಸ್ಪತ್ರೆಯಿಂದ ವೈದ್ಯರು ಕರೆಮಾಡಿ ನಿಮಗೆ ಕರೋನಾ ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಇದರಿಂದ ಶಾಕ್‌ಗೆ ಒಳಗಾದ ಕಾನ್ಸ್‌ಟೇಬಲ್ ನಾನು ಸ್ಯಾಂಪಲ್ ಕೊಟ್ಟೇ ಇಲ್ಲ, ಕೇವಲ ಫಾರಮ್ ಭರ್ತಿ ಮಾಡಿ ನೀಡಿದ್ದಷ್ಟೇ, ಕರೋನಾ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ವೈದ್ಯರು ಸ್ಪಷ್ಟ ಉತ್ತರ ನೀಡಿಲ್ಲ.

ಇದೀಗ ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸ್ಯಾಂಪಲ್ ಪಡೆಯದೆ ಕರೋನಾ ಪಾಸಿಟಿವ್ ರಿಪೋರ್ಟ್ ನೀಡಿದ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ.

ಕರೋನಾ ಮಹಾಮಾರಿಯ ಹೆಸರಲ್ಲಿ ದುಡ್ಡು ಮಾಡುವ ದಂದೆ ನಡೆಯುತ್ತಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಘಟನೆಯ ಬಗ್ಗೆ ಕಾನ್ಸ್‌ಟೇಬಲ್ ಏನು ಹೇಳಿದ್ದಾರೆ ನೋಡಿ ಈ ವಿಡಿಯೋ,

Watch Video

error: Content is protected !!