fbpx

Please assign a menu to the primary menu location under menu

ಇನ್ನೇನು 6ನೇ ಮಹಡಿಯಿಂದ ಬೀಳಲಿದ್ದ ಮಗು, ದೇವರಂತೆ ಬಂದು ಕಾಪಾಡಿದ ರಕ್ಷಣಾ ಸಿಬ್ಬಂದಿ! ಎದೆ ನಡುಗಿಸುವ ವಿಡಿಯೋ ನೋಡಿ

ಸಣ್ಣ ಮಕ್ಕಳ ಮೇಲೆ ಎಷ್ಟೇ ಎಚ್ಚರ ವಹಿಸಿದರೂ ಸಾಲದು, ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯ ಕೂಡ ಅವುಗಳ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತೆ. ಅಂತಹದೇ ಘಟನೆಯೊಂದು ರಷ್ಯಾದ ನದ್ಯಾಮ್‌ನಲ್ಲಿ ನಡೆದಿದೆ.

ಪುಟ್ಟ ಮಗುವೊಂದು ಆರನೆಯ ಮಹಡಿಯ ಮೇಲೆ ಕಿಟಕಿಯಿಂದ ತಲೆ ಹೊರಹಾಕಿ ಇಣುಕುತ್ತಿರೋದನ್ನ ಗಮನಿಸಿದ ದಾರಿಹೋಕರು ತಕ್ಷಣಾ ರಕ್ಷಣಾ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕಿಟಕಿಗೆ ಯಾವುದೇ ರೀತಿಯ ತಡೆ ಇರಲಿಲ್ಲ, ಸ್ಲೈಡಿಂಗ್ ಡೋರ್‌ನ ಲಾಕ್ ಸರಿಯಾಗಿ ಹಾಕದ ಕಾರಣ ಮಗು ಅದನ್ನು ತೆರೆದು ಕೆಳಗೆ ಇಣುಕೋಕೆ ಶುರು ಮಾಡಿದೆ.

ಕ್ಷಣಗಳು ಉರುಳಿದಂತೆ ಮಗು ಯಾವುದೇ ಭಯವಿಲ್ಲದೆ ಕಿಟಕಿ ಹತ್ತಿ ಮತ್ತಷ್ಟು ಮುಂದಕ್ಕೆ ಬರಲು ಯತ್ನಿಸಿದೆ. ಇನ್ನೇನು ಮಗು ಬಿದ್ದೇ ಬಿಡ್ತು ಎನ್ನುವಷ್ಟರ ಮಟ್ಟಿಗೆ ಅದು ತನ್ನ ದೇಹವನ್ನು ಕಿಟಕಿಯಿಂದ ಹೊರಹಾಕಿತ್ತು.

ರಕ್ಷಣಾ ಸಿಬ್ಬಂದಿಗಳಿಗೆ ಮಗುವನ್ನು ರಕ್ಷಿಸಲು ಸಹಾಯವಾಗುವಂತಹ ಯಾವುದೇ ವ್ಯವಸ್ಥೆ ಆ ಕಟ್ಟಡದಲ್ಲಿ ಇರಲಿಲ್ಲ. ತಕ್ಷಣ ಕ್ರೇನ್‌ಗೆ ಏಣಿಗಳನ್ನು ಜೋಡಿಸಿ ಮಗುವಿನ ರಕ್ಷಣೆ ನಡೆಸಲು ರಕ್ಷಣಾ ಸಿಬ್ಬಂದಿ ತಯಾರಿ ನಡೆಸಿದ್ದಾರೆ.

ಕೆಳಗೆ ರಕ್ಷಣಾ ಕಾರ್ಯಾಚರಣೆಗೆ ಸಿದ್ದತೆ ನಡೆಯುತ್ತಿರೋದನ್ನ ಗಮನಿಸಿದ ಮಗು ಕಿಟಕಿಯಿಂದ ಮತ್ತೆ ಮುಂದೆ ಬಂದು ಅದರ ವೀಕ್ಷಣೆಗೆ ತೊಡಗಿದ್ದು, ಇದು ರಕ್ಷಣಾ ಸಿಬ್ಬಂದಿಗೆ ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ. ಕೂಡಲೇ ಸಿಬ್ಬಂದಿ ಕ್ರೇನ್ ಮೂಲಕ ಮೇಲಕ್ಕೆ ಬಂದಿದ್ದಾರೆ.

ಏಣೆ ಕಿಟಕಿಯ ಹತ್ತಿರ ಸಮೀಸುತ್ತಿದ್ದಂತೆ ಬೆದರಿದ ಮಗು ತಕ್ಷಣ ಕಿಟಕಿಯಿಂದ ಹಿಂದಕ್ಕೆ ಸರಿದಿದೆ. ರಕ್ಷಣಾ ಸಿಬ್ಬಂದಿ ತಕ್ಷಣ ಕಿಟಕಿಯಿಂದ ಒಳಹೊಕ್ಕು ಮಗುವನ್ನು ರಕ್ಷಿಸಿದೆ. ಇದೀಗ ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ‘ಡೈಲ್ ಮೈಲ್’ ಶೇರ್ ಮಾಡಿದ್ದು, ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!