fbpx

ಬೋಟ್ ನಿಂದ ನೆಗೆದು ದೈತ್ಯ ತಿಮಿಂಗಿಲದ ಮೇಲೆ ಕೂತು ಸವಾರಿ ಮಾಡಿದ ವ್ಯಕ್ತಿ, ವೈರಲ್ ವಿಡಿಯೋ ಇಲ್ಲಿದೆ ನೋಡಿ

ಆನೆ, ಕುದುರೆ, ಒಂಟೆ ಮೇಲೆ ಸವಾರಿ ಮಾಡೋದನ್ನ ನಾವು ಸಾಮಾನ್ಯವಾಗಿ ನೋಡಿರ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ದೈತ್ಯ ತಿಮಿಂಗಿಲದ ಮೇಲೆ ಕೂತು ಸವಾರಿ ಮಾಡೋ ಮೂಲಕ ಸಾಹಸ ಮೆರೆದಿದ್ದಾನೆ.

ಸಮುದ್ರದಲ್ಲೇ ಅಪಾಯಕಾರಿ ಮೀನುಗಳಲ್ಲಿ ಒಂದಾದ ತಿಮಿಂಗಿಲದ ಮೇಲೆ ಕೂತು ವ್ಯಕ್ತಿಯೊಬ್ಬ ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಡೈಲಿ ಮೇಲ್ ಈ ಬಗ್ಗೆ ವರದಿ ಮಾಡಿದ್ದು, ಈ ವಿಡಿಯೋ ಸೌದಿ ಅರೇಬಿಯಾದಲ್ಲಿ ಸೆರೆ ಹಿಡಿದಿರೋದು ಎಂದು ಅದು ತಿಳಿಸಿದೆ.

ಸೌದಿ ಅರೇಬಿಯಾದ ಕೆಂಪು ಸಮುದ್ರದಲ್ಲಿ ಈ ವ್ಯಕ್ತಿ ತನ್ನ ಸಾಹಸ ಪ್ರದರ್ಶಿಸಿದ್ದಾನೆ. ಝಕಿ ಅಲ್ ಸಬಾಹಿ ಎಂಬ ವ್ಯಕ್ತಿ ತನ್ನ ಯಾಂತ್ರಿಕ ದೋಣಿಯ ಮೂಲಕ ಸಮುದ್ರಕ್ಕೆ ಇಳಿದಿದ್ದು, ತಿಮಿಂಗಿಲ ಕಂಡಿದ್ದೆ ತಡ ಅದರ ಮೇಲೆ ಡೈವ್ ಹೊಡೆದು ಅದರ ಮೇಲೆ ಕೂತು ಸ್ವಲ್ಪ ಹೊತ್ತು ಸವಾರಿ ಮಾಡಿದ್ದಾನೆ

ಈತ ಸವಾರಿ ಮಾಡುತ್ತಿದ್ದಂತೆ ದೋಣಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ‘ಹುಷಾರು, ಅದು ನಿನ್ನ ನುಂಗಿ ಬಿಡಬಹುದು’ ಎಂದು ಎಚ್ಚರಿಸಿದ್ದಾನೆ. ಆದರೆ ಈತ ಮಾತ್ರ ನಿಶ್ಚಿಂತೆಯಾಗಿ ಅದರ ಮೇಲೆ ಕೂತು ಎಂಜಾಯ್ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಸೌದಿಯಲ್ಲಿ ಇಂತಹ ಘಟನೆಗಳು ಈ ಮೊದಲೂ ನಡೆದಿದೆಯಂತೆ, ಆದರೆ ಅಲ್ಲಿನ ಸರ್ಕಾರ ಮಾತ್ರ ಇದರ ಬಗ್ಗೆ ಏನೂ ಕ್ರಮವನ್ನೂ ಕೈಗೊಂಡಿಲ್ಲ. ಕೆಲವರು ಇಂತಹ ಸಾಹಸವನ್ನು ಮೆಚ್ಚಿಕೊಂಡ್ರೆ, ಇನ್ನು ಕೆಲವರು ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!