fbpx

ಪುಟಾಣಿ ಕಂದನ ಮೇಲೆ ಹೆತ್ತತಾಯಿಯ ಕ್ರೌರ್ಯ! ಕೈಕಾಲು ಕಟ್ಟಿ ಕಾಲಿನಿಂದ ಒದ್ದು ಹಲ್ಲೆನಡೆಸುವ ಸಿಸಿಟಿವಿ ವಿಡಿಯೋ ವೈರಲ್

ಹೆತ್ತ ತಾಯಿಯೇ ಹದಿನೈದು ತಿಂಗಳ ಪುಟ್ಟ ಕಂದಮ್ಮನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಬಯಲಾಗಿದೆ. ಮಗುವಿನ ತಂದೆಯೇ ಪತ್ನಿಯ ಕ್ರೌರ್ಯವನ್ನು ಜಗತ್ತಿನ ಮುಂದಿಡಲು ಮನೆಗೆ ಸಿಸಿಟಿವಿ ಅಳವಡಿಸಿದ್ದು, ಮಹಿಳೆ ಮಗುವಿನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಒಡಿಶಾದ ಪುರಿಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕ್ರೂರಿ ತಾಯಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪುರಿ ಜಿಲ್ಲೆಯ ಗೋಪ್ ನಗರ ಚಂದ್ರಾದರ್ ನಾಯಕ್ ತನ್ನ ಪತ್ನಿ ಸ್ವಂತ ಮಗು ಹಾಗೂ ನನ್ನ ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದಾಳೆ ಎಂದು ವಿಡಿಯೋ ಸಾಕ್ಷಿ ಸಮೇತ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ಪೋಲೀಸರು ಒಂದು ಸಲ ಶಾಕ್‌ಗೆ ಒಳಗಾಗಿದ್ದರು.


Continue Reading

img 20200818 wa00081170489612390785669

ಪಾಪಿ ಮಹಿಳೆ ಹದಿನೈದು ತಿಂಗಳ ಪುಟ್ಟ ಮಗುವಿನ ಮೇಲೆ ಬಡಿಗೆಯಿಂದ ಹಲ್ಲೆನಡೆಸಿದ್ದೂ ಅಲ್ಲದೆ, ಕೈಕಾಲು ಕಟ್ಟಿ ಹಾಕಿ ಕಾಲಿನಿಂದ ಒದ್ದು, ತುಳಿದು ಮಾರಣಾಂತಿಕವಾಗಿ ಹಿಂಸೆ ನೀಡಿದ್ದಾಳೆ. ವೃದ್ದ ಅತ್ತೆಗೂ ಇದೇ ರೀತಿ ಹಲ್ಲೆ ನಡೆಸಿದ್ದಾಳೆ. ಪತ್ನಿಯ ಕ್ರೌರ್ಯದಿಂದ ಬೇಸತ್ತ ಪತಿ ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಸಾಕ್ಷಿ ಸಂಗ್ರಹಿಸಿ ಪೋಲೀಸರಿಗೆ ನೀಡಿದ್ದಾನೆ.

ಇದನ್ನೂ ಓದಿ:  ಸಾಕು ಬೆಕ್ಕಿಗೆ ಅದ್ದೂರಿ ಸೀಮಂತ ಕಾರ್ಯ ನೆರವೇರಿಸಿದ ಕುಟುಂಬ, ವೈರಲ್ ವಿಡಿಯೋ ನೋಡಿ

ಈ ಬಗ್ಗೆ ಪ್ರಕರಣ ದಾಖಲಿಸಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ಬೇರೆಯದ್ದೇ ಕಥೆ ಹೇಳಿದ್ದಾಳೆ. ನನಗೆ ನನ್ನ ಪತಿಯ ಮನೆಯಲ್ಲಿ ಸರಿಯಾಗಿ ಊಟ ಕೊಡ್ತಿಲ್ಲ, ನನ್ನ ಮಗು ಊಟ ಬೇಕು ಎಂದು ಅತ್ತಿದ್ದರಿಂದ ನಾನು ಮಾನಸಿಕವಾಗಿ ನೊಂದು ಮಗು ಮತ್ತು ಅತ್ತೆಯ ಹಲ್ಲೆ ನಡೆಸುತ್ತಿರೋದಾಗಿ ಹೇಳಿದ್ದಾಳೆ.

ಕಿರಾಣಿ ಅಂಗಡಿ ನಡೆಸುವ ಪತಿ ಹಾಗೂ ಆತನ ತಾಯಿ ಈಕೆಯ ಮಾತನ್ನು ಅಲ್ಲಗಳೆದಿದ್ದು, ನಮ್ಮ ಮನೆಯಲ್ಲಿ ಅಂತಹ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ. ಆಕೆ ಬೇಕೆಂದೆ ನನ್ನ ಮಗು ಹಾಗೂ ತಾಯಿಯ ಮೇಲೆ ಹಲ್ಲೆ ನಡೆಸೋದು ಎಂದು ಪತಿ ಆರೋಪಿಸಿದ್ದಾನೆ. ಪೊಲೀಸರು ಈ ವಿಚಾರವಾಗಿ ತನಿಖೆಯನ್ನು ಮುಂದುವರೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!