fbpx

ಇನ್ನೇನು ಪ್ರವಾಹದಲ್ಲಿ ಕೊಚ್ಚಿ ಹೋಗಲಿದ್ದ ಮೂವರನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಜೆಸಿಬಿ ಚಾಲಕ, ವೈರಲ್ ವಿಡಿಯೋ ನೋಡಿ

ಮಳೆಯ ಆರ್ಭಟಕ್ಕೆ ಹಲವು ರಾಜ್ಯಗಳು ತತ್ತರಿಸಿಹೋಗಿವೆ. ಕರೋನಾ ಆರ್ಭಟದ ಮಧ್ಯೆ ಮಳೆಯೂ ಜನರನ್ನ ಬಿಟ್ಟುಬಿಡದೆ ಕಾಡುತ್ತಿದ್ದು, ಅನೇಕ ಪ್ರದೇಶಗಳು ಜಲಾವೃತಗೊಂಡಿದೆ.

ಕರ್ನಾಟಕದ ಅನೇಕ ಜಿಲ್ಲೆಗಳು ಕೂಡ ಪ್ರವಾಹ ಭೀತಿಯನ್ನು ಎದುರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದ ಆರ್ಭಟಕ್ಕೆ ದೇಶದಾದ್ಯಂತ ಅನೇಕ ಮಂದಿ ಪ್ರಾಣ ಕಳೆದುಕೊ‌ಂಡಿದ್ದಾರೆ.

ಇದೀಗ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಕಾರ್‌ನಿಂದ ಮೂವರನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರವಾಹದ ನಡುವೆ ಸಿಲುಕಿ ಹಾಕಿಕೊಂಡಿದ್ದ ಕಾರು ಬಹುತೇಕ ಮುಳುಗಡೆಯಾಗುತ್ತಿದ್ದಂತೆ, ಅದರಲ್ಲಿದ್ದ ಮೂವರು ಕಾರಿನ ಮೇಲೆ ಹತ್ತಿ ಕೂತಿದ್ದಾರೆ.

ಆದರೆ ಪ್ರವಾಹ ಮತ್ತಷ್ಟು ಏರಿಕೆಯಾಗಿದ್ದು, ಇನ್ನೇನು ಕಾರಿನ ಸಮೇತ ಜಲಸಮಾಧಿಯಾಗಲಿದ್ದರು. ಕೊನೆಗೂ ಅಲ್ಲಿದ್ದ ಅಧಿಕಾರಿಗಳು ಅಪಾಯದಲ್ಲಿ ಸಿಲುಕಿದ್ದ ಮೂವರನ್ನ ಜೆಸಿಬಿ ಮೂಲಕ ರಕ್ಷಿಸಿದ್ದಾರೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲವರ ಗಮನ ಸೆಳೆದಿದ್ದು, ಜೆಸಿಬಿ ಚಾಲಕ ಮತ್ತು ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!