ಕಮ್ಯುನಿಸ್ಟ್ ಆಳ್ವಿಕೆಯ ಚೀನಾದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತಷ್ಟು ಹೆಚ್ಚಾಗಿದೆ. ಇಷ್ಟರವರೆಗೆ ಉಯ್ಘರ್ ಮುಸ್ಲಿಮರನ್ನು ಅನಧಿಕೃತವಾಗಿ ಬಂಧಿಸೋದು, ಮಹಿಳೆಯರ ಬಲವಂತದ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸೋ ಮೂಲಕ ಅವರ ಜನ ಸಂಖ್ಯೆ ನಿಯಂತ್ರಿಸುವ ಕೆಲಸಕ್ಕೆ ಕೈ ಹಾಕಿತ್ತು.
ಉಯ್ಘರ್ ಮುಸ್ಲಿಮರಿಗೆ ಭ’ಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಇದೆ, ಅವರಿಂದ ದೇಶಕ್ಕೆ ಅಪಾಯ ಇದೆ ಎಂಬ ಅನುಮಾನವೇ ಕಮ್ಯುನಿಸ್ಟ್ ರಾಷ್ಟ್ರ ಅವರ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಲು ಕಾರಣ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಚೀನಾ ಉಯ್ಘರ್ ಮುಸ್ಲಿಮರಿಗೆ ಸೇರಿರುವ ಮಸೀದಿಗಳನ್ನು ವಶಪಡಿಸಿಕೊಂಡು, ಉರುಳಿಸಿ ಆ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ.
ಇನ್ನೂ ಕೆಲ ಕಡೆಗಳಲ್ಲಿ ಪ್ರವಾಸಿಗರಿಗಾಗಿ ಮಧ್ಯದಂಗಡಿ ಹಾಗೂ ಸಿಗರೇಟ್ ಮಾರಾಟ ಮಳಿಗೆಗಳನ್ನು ತೆರೆದಿದೆ. ಚೀನಾದ ಪ್ರಮುಖ ನಗರಗಳಲ್ಲಿ ಒಂದಾದ ಕ್ಸಿನ್ಜಿಯಾಂಗ್ ಪ್ರಾಂತ್ಯದ ಸುನ್ಗಮ್ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಎರಡು ಮಸೀದಿಗಳನ್ನು ಕೆಡವಿ ಆ ಜಾಗದಲ್ಲಿ ಸಾರ್ವಜನಿಕ ಶೌಚಗೃಹಗಳನ್ನು ಕಟ್ಟಲಾಗಿದೆ. 2018ರಲ್ಲಿ ಟೋಕುಲ್ ಮಸೀದಿಯನ್ನು ಕೆಡವಲಾಗಿದ್ದ ಜಾಗದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇನ್ನು ಅಜ್ನಾ ಮಸೀದಿ ಕೆಡವಿದ ಜಾಗದಲ್ಲಿ ಸಿಗರೇಟ್ ಹಾಗೂ ಮದ್ಯ ಮಾರಾಟ ಮಳಿಗೆ ತಲೆ ಎತ್ತಿದೆ. ಈ ಮೂಲಕ ಚೀನಾ ಮುಸ್ಲಿಂ ಮೂಲಭೂತವಾದಿಗಳನ್ನು ಬುಡದಿಂದಲೇ ಕಿತ್ತೊಗೆಯಲು ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ನಾಯಕರುಗಳು ಹೇಳಿದ್ದಾರೆ.
Watch Video
