fbpx

Please assign a menu to the primary menu location under menu

ತನ್ನ ತಾಯಿಯನ್ನು ಹೊತ್ತೊಯ್ದ ಗೊಕಳ್ಳರನ್ನು ಹಿಂಬಾಲಿಸಿಕೊಂಡು ಓಡಿದ ಕರು! ಸಿಸಿಟಿವಿಯಲ್ಲಿ ಸೆರೆಯಾಯಿತು ದೃಶ್ಯ

ಮಲೆನಾಡಿನ ಹಲವು ಭಾಗಗಳಲ್ಲಿ ಗೋಕಳ್ಳರ ಅಟ್ಟಹಾಸ ಮುಂದುವರೆದಿದೆ. ರಾತ್ರೋರಾತ್ರಿ ಕೊಟ್ಟಿಗೆಗಳಿಗೆ ನುಗ್ಗಿ ಸಾಲು ದನಗಳನ್ನು ಹೊತ್ತೊಯ್ಯುವಷ್ಟರ ಮಟ್ಟಿಗೆ ಗೋಕಳ್ಳರು ಮುಂದುವರೆದಿದ್ದಾರೆ.

ಮೊದಲೆಲ್ಲಾ ಬೀದಿ ದನಗಳನ್ನು ಕದ್ದೊಯ್ಯುತ್ತಿದ್ದ ಪುಡಾರಿಗಳು ಇದೀಗ ಹಟ್ಟಿಗೆ ನುಗ್ಗಿ ರೈತರ ಜೀವನಾಧಾರವಾದ ಹಸುಗಳನ್ನೇ ಕಳ್ಳತನ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಹೊರವಲಯದ ತೇಗೂರಿನಲ್ಲಿ ನಡೆದ ಹಸುಗಳ್ಳತನದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ.

ರಾತ್ರೋರಾತ್ರಿ ಮನೆಯೊಂದರ ಹೊರಗೆ ಕಟ್ಟಿ ಹಾಕಲಾಗಿದ್ದ ಹಸುವನ್ನು ಗೊಕಳ್ಳರು ಹೊತ್ತೊಯ್ದಿದ್ದಾರೆ. ಸ್ಕಾರ್ಪಿಯೋ ವಾಹನದಲ್ಲಿ ಆಗಮಿಸಿದ ಇಬ್ಬರು ಕದೀಮರು ಈ ಕೃತ್ಯ ನಡೆಸಿದ್ದಾರೆ.

ತಾಯಿ ಹಸುವನ್ನು ಹೊತ್ತೊಯ್ಯುತ್ತಿದ್ದಂತೆ ಕರುವು ಕಾರಿನ ಹಿಂದೆ ಸ್ವಲ್ಪ ದೂರ ಓಡಿಹೋಗಿದೆ. ಕರುವಿನ ಮೂಕವೇದನೆ ಕರುಳು ಹಿಂಡುವಂತಿದೆ. ಈ ಗೊಕಳ್ಳರಿಗೆ ಪೋಲೀಸರು ಹಾಗೂ ಸ್ಥಳೀಯ ರಾಜಕೀಯ ನಾಯಕರ ಕೃಪಾಕಟಾಕ್ಷ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಮಿಷನ್ ದಂದೆಯ ಮೂಲಕ ಇವರಿಗೆ ಹಣ ಸಂದಾಯವಾಗುತ್ತಿದೆ ಎನ್ನಲಾಗುತ್ತಿದೆ.

ಸದ್ಯ ಈ ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನು ಹಿಡಿಯಲು ಬಲೆಬೀಸಲಾಗಿದೆ. ಗೋವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!